News Kannada
Monday, September 26 2022

ಕರ್ನಾಟಕ

ಅರಣ್ಯದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಅರಣ್ಯ ಇಲಾಖೆಯಿಂದ ತಂಡ ರಚನೆ - 1 min read

Photo Credit :

ಅರಣ್ಯದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಅರಣ್ಯ ಇಲಾಖೆಯಿಂದ ತಂಡ ರಚನೆ

ಚಾಮರಾಜನಗರ: ಅರಣ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮತ್ತು ಕ್ಷಿಪ್ರ ಕಾರ್ಯಾಚರಣೆ ಮಾಡಲು ಆರು ಉಪ ವಲಯ ಅರಣ್ಯ ಅಧಿಕಾರಿಗಳನ್ನೊಳಗೊಂಡ (ಡಿಆರ್‌ಎಫ್‌ಒ) ತಂಡವನ್ನು ಅರಣ್ಯ ಇಲಾಖೆಯು ರಚಿಸಿದೆ.

ಮೊದಲ ಬಾರಿಗೆ ಚಾಮರಾಜನಗರದ ಪ್ರಾದೇಶಿಕ ವೃತ್ತದಲ್ಲಿ ಇಂತಹ ಒಂದು ತಂಡವನ್ನು ರಚಿಸಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಕ್ಷಿಪ್ರ ಕಾರ್ಯ ಪಡೆ ಮಾದರಿಯಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮನೋಜ್‌ ಕುಮಾರ್‌ ಅವರು ತಿಳಿಸಿದರು.

ಈಗಾಗಲೇ ಅರಣ್ಯ ಇಲಾಖೆಯು ಕೊಡಗಿನಲ್ಲಿ ಆನೆಗಳನ್ನು ಕಾಡಿಗೆ ಅಟ್ಟಲು,ಕಳ್ಳ ಬೇಟೆ ತಡೆಯಲು ಕ್ಷಿಪ್ರ ಕಾರ್ಯ ಪಡೆಯನ್ನು ರಚಿಸಲಾಗಿದ್ದು ಅದೇ ಮಾದರಿಯಲ್ಲಿ ಇದು ಕಾರ್ಯ ನಿರ್ವಹಿಸಲಿದೆ.

ಸದ್ಯಕ್ಕೆ ಅದು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲಿದ್ದು , ‘ಆರು ಡಿಆರ್‌ಎಫ್‌ಒಗಳನ್ನು ಸೇರಿಸಿ ಪ್ರತ್ಯೇಕ ತಂಡವೊಂದನ್ನು ಮಾಡಲಾಗಿದೆ. ಸದ್ಯಕ್ಕೆ ಈ ತಂಡ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡಲಿದ್ದು ನಂತರ ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದವರೂ ಅರಣ್ಯ ಸಂರಕ್ಷಣೆ ಕಾರ್ಯಕ್ಕೆ ತಂಡವನ್ನು ಬಳಸಿಕೊಳ್ಳಬಹುದು ’ ಎಂದು ಮನೋಜ್‌ ಕುಮಾರ್‌ ಹೇಳಿದರು.

ಪೊಲೀಸ್‌ ಇಲಾಖೆಯಲ್ಲಿ ಮೀಸಲು ಪಡೆ ಇರುವಂತೆ, ಈ ತಂಡವೂ ಕೂಡ ಮೀಸಲು ಕಾರ್ಯಕ್ಕೆ ಸೀಮಿತ. ತುರ್ತು ಪರಿಸ್ಥಿತಿಯಲ್ಲಿ ಆಯಾ ಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಈ ತಂಡ ನೆರವಾಗಲಿದೆ.

‘ತುರ್ತು ಸಂದರ್ಭದಲ್ಲಿ ಇಲಾಖೆಯು ಈ ತಂಡದ ನೆರವನ್ನು ಪಡೆಯಬಹುದು. ಉದಾಹರಣೆಗೆ ಕಾಳ್ಗಿಚ್ಚು ಉಂಟಾದ ಸಂದರ್ಭದಲ್ಲಿ ಅಥವಾ ಕಳ್ಳಬೇಟೆ ಪ್ರಕರಣಗಳಲ್ಲಿ ತನಿಖೆಯ ವೇಳೆ… ಹೀಗೆ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕೆಲಸಕ್ಕೆ ಈ ತಂಡ ನೆರವಾಗಲಿದೆ’ ಎಂದು ಮನೋ‌ಜ್‌ ಕುಮಾರ್‌ ಅವರು ವಿವರಿಸಿದರು.

‘ಸದ್ಯಕ್ಕೆ ತಂಡವನ್ನು ಮಾತ್ರ ರಚಿಸಲಾಗಿದೆ. ಇದಕ್ಕೆ ಪ್ರತ್ಯೇಕ ವಾಹನ ಹಾಗೂ ಉಪಕರಣಗಳ ಅಗತ್ಯವಿದೆ. ಅದನ್ನು ಶೀಘ್ರದಲ್ಲಿ ಕೊಡಿಸಲಾಗುವುದು. ಇಲಾಖೆಗೆ ಪತ್ರ ಬರೆದು, ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

See also  ವಿಧವಾ ಪುನರ್ ವಿವಾಹ ಯೋಜನೆಯ ಹಣ ಗುಳುಂ: ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು