News Kannada
Monday, September 26 2022

ಕರ್ನಾಟಕ

ಭಕ್ತರಿಗೆ ಮಾರ್ಗ ತೋರಿಸಿದ ಒಂಟಿ ಸಲಗ? - 1 min read

Photo Credit :

ಭಕ್ತರಿಗೆ ಮಾರ್ಗ ತೋರಿಸಿದ ಒಂಟಿ ಸಲಗ?

ಚಾಮರಾಜನಗರ: ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರಬೆಟ್ಟದ  ನಾಗಮಲೆಯಲ್ಲಿರುವ ಮಾದಪ್ಪನ ದರ್ಶನಕ್ಕಾಗಿ ತೆರಳುವ ರಸ್ತೆಯಲ್ಲಿ ಒಂಟಿ ಸಲಗವೊಂದು  ಕಾಣಿಸಿಕೊಂಡು ಅದೇ ರಸ್ತೆಯಲ್ಲಿ ನಾಗಮಲೆಯತ್ತ ಹೆಜ್ಜೆ ಹಾಕಿದ ಅಪರೂಪದ  ದೃಶ್ಯ ಭಕ್ತರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೈ ಮಹದೇಶ್ವರಬೆಟ್ಟದಿಂದ ಸುಮಾರು 18ಕಿ.ಮೀ. ದೂರದಲ್ಲಿರುವ ನಾಗಮಲೆಗೆ ಭಕ್ತರು ಕಾಲ್ನಡಿಗೆಯಲ್ಲಿ ತೆರಳಬೇಕು. ಕಾಲ್ನಡಿಗೆಯಲ್ಲಿ ತೆರಳುವ ವೇಳೆ ಭಕ್ತರಿಗೆ ಅದೇ ರಸ್ತೆಯಲ್ಲಿ ಒಂಟಿ ಸಲಗವೊಂದು ಎದುರಾಗಿದೆ. ಅದು ಎದುರಾದ ವೇಳೆ ಭಯ ಭೀತರಾದ ಭಕ್ತರು ಕೆಲ ಕಾಲ ಅಲ್ಲಿಯೇ ನಿಂತರು. ಆದರೆ ಎದುರು ಬರುತ್ತಿದ್ದ ಸಲಗ ಮತ್ತೆ ಹಿಂತಿರುಗಿ ನಾಗಮಲೆಯತ್ತಲೇ ತೆರಳ ತೊಡಗಿತು. ಇದರಿಂದ ಭಕ್ತರು ನಿಟ್ಟುಸಿರು ಬಿಟ್ಟು ಮತ್ತೆ ಉಘೇ ಉಘೇ ಮಾದಪ್ಪ ಎಂದು ಕೂಗುತ್ತ ನಾಗಮಲೆಯತ್ತ  ಹೆಜ್ಜೆಹಾಕಿದ್ದಾರೆ.

ಭಕ್ತರಿಗೆ ಮಾರ್ಗದರ್ಶಕನಾಗಿ ನಾಗಮಲೆಯತ್ತ ತೆರಳುತ್ತಿದ್ದ ಒಂಟಿ ಸಲಗದ ಅಪರೂಪದ ದೃಶ್ಯವನ್ನು ಭಕ್ತರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಅದು ಈಗ ವೈರಲ್ ಆಗಿದೆ.

See also  ಚಾಮರಾಜನಗರದಲ್ಲಿ ಬೆಡ್‌ ಸಿಗದೇ ಸೋಂಕಿತ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು