News Kannada
Thursday, September 29 2022

ಕರ್ನಾಟಕ

ಗ್ರಾಮ ಸಹಾಯಕರು ತಹಶೀಲ್ದಾರರಂತೆ ವರ್ತಿಸುತ್ತಿದ್ದಾರೆ: ಶಾಸಕ ಅಪ್ಪಚ್ಚುರಂಜನ್ ಅಸಮಾಧಾನ - 1 min read

Photo Credit :

ಗ್ರಾಮ ಸಹಾಯಕರು ತಹಶೀಲ್ದಾರರಂತೆ ವರ್ತಿಸುತ್ತಿದ್ದಾರೆ: ಶಾಸಕ ಅಪ್ಪಚ್ಚುರಂಜನ್ ಅಸಮಾಧಾನ

ಮಡಿಕೇರಿ: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಇವರನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಂದಾಯ ಇಲಾಖೆ ವತಿಯಿಂದ ಸೋಮವಾರಪೇಟೆ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಪೌತಿಖಾತೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವು ಗ್ರಾಮ ಸಹಾಯಕರು ತಾವೇ ತಹಶೀಲ್ದಾರ್‍ ರಂತೆ ವರ್ತಿಸುತ್ತಿದ್ದಾರೆ, ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ತೊಂದರೆ ನೀಡುವುದರೊಂದಿಗೆ ವಸೂಲಾತಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಅವರು, ಇಂತವರ ವಿರುದ್ಧ ದೂರುಗಳು ಬಂದಲ್ಲಿ ಗ್ರಾಮಲೆಕ್ಕಿಗರು, ಕಂದಾಯ ಪರಿವೀಕ್ಷಕರು ತಕ್ಷಣ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಪೌತಿಖಾತೆ ಪ್ರಕರಣಗಳಲ್ಲಿ ಅಗತ್ಯ ದಾಖಲೆ ಪಡೆದು, ಸ್ಥಳ ಮಹಜರು ನಡೆಸಿ ತ್ವರಿತವಾಗಿ ಕಡತ ವಿಲೇವಾರಿ ಮಾಡಬೇಕು. ಅಲ್ಲದೇ ಕಂದಾಯ ಇಲಾಖೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ತಾ.ಪಂ. ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಕಂದಾಯ ಇಲಾಖೆ ಸಿಬ್ಬಂದಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಪೌತಿಖಾತೆ ಆಂದೋಲನ ಯಶಸ್ವಿಯಾಗಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಮರಣ ದೃಡೀಕರಣ ಪಡೆಯಲು ಕಂದಾಯ ಇಲಾಖೆಯಿಂದ ವಂಶವೃಕ್ಷ ಪಡೆಯಬೇಕೆಂದು ನ್ಯಾಯಾಲಯ ತಿಳಿಸಿದೆ. ಆದರೆ ಕಂದಾಯ ಇಲಾಖೆ ಸಂಬಂಧಿಸಿದವರ ಮರಣ ದೃಢೀಕರಣ ಪತ್ರ ಬೇಕೆಂದು ಕೇಳುತ್ತಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ತಹಶೀಲ್ದಾರರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ತಹಶೀಲ್ದಾರ್ ಗೋವಿಂದರಾಜು, ಎಲ್ಲಾ ಶಿರಸ್ತೇದಾರ್, ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ಹಾಜರಿದ್ದರು.

 

See also  ಸಮರ್ಥ, ಸ್ವಾಭಿಮಾನದ ಅಖಂಡ ಭಾರತ ರಚನೆಯಾಗಿದೆ :ಕೋಟ ಶ್ರೀನಿವಾಸ ಪೂಜಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು