News Kannada
Monday, September 26 2022

ಕರ್ನಾಟಕ

ಬೇಗೂರಿನ ಹಳ್ಳಕೊಳ್ಳದ ರಸ್ತೆಯಲ್ಲಿ ಸಾಗೋದೇ ಸರ್ಕಸ್ - 1 min read

Photo Credit :

ಬೇಗೂರಿನ ಹಳ್ಳಕೊಳ್ಳದ ರಸ್ತೆಯಲ್ಲಿ ಸಾಗೋದೇ ಸರ್ಕಸ್

ಪಿರಿಯಾಪಟ್ಟಣ: ರಸ್ತೆಯಲ್ಲಿ ಗುಂಡಿಯೋ ಗುಂಡಿಯಲ್ಲಿ ರಸ್ತೆಯೋ ಎಂದು ಈ ರಸ್ತೆಯಲ್ಲಿ ಸಂಚರಿಸುವಾಗ ಒಂದು ಬಾರಿ ಅನ್ನಿಸದೆ ಇರಲಾರದು ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಗ್ರಾಮದ ಜನತೆ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿ ವರ್ಗಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ತಾಲ್ಲೂಕಿನ ಬೇಗೂರು ಗ್ರಾಮದ ಮುಖ್ಯ ರಸ್ತೆಯಿಂದ ಜಕ್ಕನಕಟ್ಟೆವರೆಗೆ ಸಂಚರಿಸುವ ರಸ್ತೆಯೂ ಡಾಂಬರೀಕರಣಗೊಳ್ಳದೆ ಹಳ್ಳ ಕೊಳ್ಳಗಳಿಂದ ಕೂಡಿದ್ದು, ಗ್ರಾಮಸ್ಥರು ಸಂಕಷ್ಟವನ್ನು ಅನುಭವಿಸಬೇಕಾಗಿದೆ.

ನೂರಾರು ಮನೆಗಳಿದ್ದು, ಅಲ್ಲಿನ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಈ ಮಾರ್ಗದಲ್ಲಿಯೇ ಸಂಚರಿಸಬೇಕು. ಈ ಭಾಗದಲ್ಲಿ ಬಹು ಭಾಗ ದಲಿತ ಸಮುದಾಯದ ಜನತೆಯೇ ಹೆಚ್ಚಿದ್ದಾರೆ. ಇದಲ್ಲದೆ ಮುತ್ತೂರು, ಮಾಗಳಿ, ಬೇಗೂರು ಸೇರಿದಂತೆ ವ್ಯವಸಾಯ ಮಾಡುತ್ತಿರುವ ಇತರೆ ಗ್ರಾಮದ ರೈತರು ಕೂಡ ವ್ಯವಸಾಯ ಪರಿಕರಗಳನ್ನು ಈ ರಸ್ತೆಯ ಮೂಲಕವೇ ಸಾಗಿಸಬೇಕು. ಗ್ರಾಮ ದೇವತೆಯ ದೇವಸ್ಥಾನಕ್ಕೆ ತೆರಳುವ ಭಕ್ತಾಧಿಗಳು ಕೂಡ ಈ ಹದಗೆಟ್ಟ ರಸ್ತೆಯ ಮೂಲಕವೇ ಸಾಗಬೇಕು. ಆದ್ದರಿಂದ ಈ ರಸ್ತೆಯಲ್ಲಿ ಪ್ರಯಾಣಿಸಬೇಕಾದರೆ  ತುಂಬಾ ಪ್ರಯಾಸವಾಗುವುದರ ಜೊತೆಗೆ  ಇತ್ತೀಚೆಗೆ ದಿನ ನಿತ್ಯ ಬೀಳುತ್ತಿರುವ  ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ತುಂಬಿ  ರಸ್ತೆಯಲ್ಲಾ ಕೆಸರುಮಯವಾಗಿದ್ದು, ಯಾವುದು  ಗುಂಡಿ, ಎಷ್ಟು ಹಳ್ಳವಿದೆ ಎಂದು ತಿಳಿಯದೆ  ಹಗಲು ವೇಳೆಯಲ್ಲಿಯೇ ಎಷ್ಟೋ ವಾಹನಗಳಿಂದ  ಬಿದ್ದು ಕೈ ಕಾಲು ಮುರಿದು ಆಸ್ಪತ್ರೆ ಸೇರಿದ ಘಟನೆಗಳು ಜರುಗಿದೆ.

ರಾತ್ರಿ  ವೇಳೆಯಲ್ಲಂತೂ ವಾಹನ ಸಂಚಾರ ತುಂಬಾ ಕಷ್ಟ ಜೊತೆಗೆ ಭಯದಿಂದ ಸಂಚಾರ ಮಾಡಬೇಕಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಈ ಕುರಿತಂತೆ ಮಾತನಾಡಿರುವ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕ ನರಸಿಂಹ ಮೂರ್ತಿ ಬೇಗೂರು ಅವರು ಈ ರಸ್ತೆಯನ್ನು ದುರಸ್ಥಿಪಡಿಸುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮದ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ಇದೇ ಪರಿಸ್ಥಿತಿಯಿದ್ದು, ಈ ರಸ್ತೆಗೆ ನಕ್ಷೆಯಲ್ಲಿ ರಸ್ತೆಯಿರುವ ಕುರಿತು ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೆ ನಿಲಕ್ರ್ಷತನವಹಿಸಿರುವುದು ಖಂಡನೀಯ. ಆದ್ದರಿಂದ ಈ ರಸ್ತೆಯ ಡಾಂಬರೀಕರಣಕ್ಕೆ ಅತೀ ಶೀಘ್ರದಲ್ಲಿಯೇ ರೂಪುರೇಷೆ ಸಿದ್ದಪಡಿಸದಿದ್ದಲಿ ದಸಂಸ ವತಿಯಿಂದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇನ್ನಾದರೂ ಚುನಾಯಿತ ಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಈ ರಸ್ತೆಗೆ ಡಾಂಬರೀಕರಣ ಮಾಡಿ ಆಗುತ್ತಿರುವ ಅಪಘಾತ ತಪ್ಪಿಸುವರೇ  ಎಂಬುದನ್ನು ಕಾದು ನೋಡಬೇಕಾಗಿದೆ.

See also  ಗೌರಿ ಹಂತಕ ‘ವಾಗ್ಮೋರೆ’ಯನ್ನು ಕೊಹ್ಲಿ ಅನ್ನುತ್ತಿದ್ದರು...
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು