News Kannada
Sunday, September 25 2022

ಕರ್ನಾಟಕ

ನಿಯಮ ಉಲ್ಲಂಘಿಸಿದ ನಿರ್ದೇಶಕನ ಸದಸ್ಯತ್ವ ರದ್ದುಗೊಳಿಸಲು ಆಗ್ರಹ - 1 min read

Photo Credit :

ನಿಯಮ ಉಲ್ಲಂಘಿಸಿದ ನಿರ್ದೇಶಕನ ಸದಸ್ಯತ್ವ ರದ್ದುಗೊಳಿಸಲು ಆಗ್ರಹ

ಮಡಿಕೇರಿ: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕರೊಬ್ಬರು 2019-20 ನೇ ಸಾಲಿನಲ್ಲಿ ದಾಸ್ತಾನು ಪರಿಶೀಲನೆ ಸಂದರ್ಭ ಸಿಮೆಂಟ್ ಶೀಟ್‍ಗಳು ಹಾನಿಗೀಡಾಗಿವೆ ಎಂದು ಹೇಳಿ ಯಾರ ಒಪ್ಪಿಗೆಯೂ ಇಲ್ಲದೆ ನಿಯಮ ಬಾಹಿರವಾಗಿ ತೆಗೆದುಕೊಂಡು ಹೋಗಿದ್ದು, ಇವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ.ಈ.ಬೋಪಯ್ಯ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಯಮ ಸಂಸ್ಥೆಗೆ ಸೇರಿದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಹಕಾರ ಇಲಾಖೆಯ ಅನುಮತಿ ಪಡೆಯಬೇಕು. ಮಹಾಸಭೆಯ ಒಪ್ಪಿಗೆ ಬೇಕು, ಸಂಸ್ಥೆಯ ವಸ್ತುಗಳ ದರವನ್ನು ಅಥವಾ ಹರಾಜಿನ ನಿರ್ಧಾರವನ್ನು ಆಡಳಿತ ಮಂಡಳಿ ಮಾಡಬೇಕಾಗುತ್ತದೆ. ಆದರೆ ಇದನ್ನು ಮೀರಿ ಶೀಟ್‍ಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಸಂಬಂಧಿಸಿದಂತೆ ಕಚೇರಿಯ ರಶೀದಿ ಸಂಖ್ಯೆ 580 ಆಗಿದ್ದು, ಅರ್ಧ ಹಣವನ್ನು ನೀಡಿರುತ್ತಾರೆ. ಆದರೆ ತೆಗೆದುಕೊಂಡು ಹೋದ ಶೀಟ್‍ಗಳು ಹಾನಿಗೀಡಾಗಿರಲಿಲ್ಲ. ಆದ್ದರಿಂದ ಸಹಕಾರ ಇಲಾಖೆ ಶೀಟ್‍ಗಳನ್ನು ಮರಳಿ ಪಡೆಯಬೇಕು ಮತ್ತು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಸಂಸ್ಥೆಗೆ ಹೊಸದಾಗಿ ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭ ರೈತ ಮಿತ್ರ ಕೂಟದ ಸದಸ್ಯರೊಬ್ಬರು ನಾಲ್ಕನೇ ದರ್ಜೆ ನೌಕರರೊಬ್ಬರಿಂದ ರೂ.25 ಸಾವಿರ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆಯೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಸಂಘದ ಸೋಮವಾರಪೇಟೆ ಶಾಖೆಯು 2018-19 ನೇ ಸಾಲಿನಲ್ಲಿ 3.50 ಲಕ್ಷ ರೂ. ನಷ್ಟ ಹೊಂದಿದ್ದು, 2019-20 ನೇ ಸಾಲಿನಲ್ಲಿ 5.50 ಲಕ್ಷ ರೂ. ನಷ್ಟ ಅನುಭವಿಸಿದೆ. ಇದಕ್ಕೆ ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣವಾಗಿದ್ದು, ಸಹಕಾರ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ನನ್ನ ಆಡಳಿತಾವಧಿಯಲ್ಲಿ ಎಲ್ಲಾ ನೌಕರರಿಗೆ ವೇತನವನ್ನು ದ್ವಿಗುಣಗೊಳಿಸಲಾಗಿದೆ. ಆದರೂ ಸಿಬ್ಬಂದಿ ವರ್ಗ ಸರಿಯಾಗಿ ಕಾರ್ಯ ನಿರ್ವಹಿಸದೆ ಸೋಮವಾರಪೇಟೆ ಶಾಖೆ ನಷ್ಟವನ್ನು ಅನುಭವಿಸಿದೆ ಎಂದು ಆರೋಪಿಸಿದರು.

ಈ ಹಿಂದೆ ಮಡಿಕೇರಿ ಪ್ರಧಾನ ಕಚೇರಿಯ ಸಭೆಯೊಂದರಲ್ಲಿ ನೌಕರರೊಬ್ಬರು ಮುಖ್ಯಸ್ಥರೊಬ್ಬರ ಬಳಿ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಆ ನೌಕರನನ್ನು ಸೋಮವಾರಪೇಟೆ ಶಾಖೆಗೆ ವರ್ಗಾಯಿಸಲಾಗಿತ್ತು. ಆದರೆ ಆಡಳಿತಾಧಿಕಾರಿಯ ಅವಧಿಯಲ್ಲಿ ಆ ನೌಕರನನ್ನು ಮತ್ತೆ ಮಡಿಕೇರಿ ಕಚೇರಿಗೆ ನಿಯೋಜಿಸಿಕೊಳ್ಳಲಾಗಿದೆ. ಈ ರೀತಿಯ ನಿಯಮ ಬಾಹಿರ ಕ್ರಮಗಳಿಂದಾಗಿ ಸಂಸ್ಥೆಯ ಪ್ರಗತಿಗೆ ದಕ್ಕೆಯಾಗುವುದರಿಂದ ಸಹಕಾರ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

2018-19 ರ ಮಳೆಹಾನಿ ಸಂದರ್ಭ ಹಾನಿಗೊಳಗಾದ ಸಂಘದ ಎಲ್ಲಾ ಸದಸ್ಯರಿಗೆ ನನ್ನ ಆಡಳಿತಾವಧಿಯಲ್ಲಿ ಅಂದಿನ ಕಾರ್ಯನಿರ್ವಹಣಾಧಿಕಾರಿ ಅವರ ಸಲಹೆ ಮೇರೆಗೆ ಪರಿಹಾರವನ್ನು ನೀಡಲಾಗಿತ್ತು. ಕೆಲವು ನಿರ್ದೇಶಕರು ಸೀಮಿತ ವ್ಯಕ್ತಿಯೊಬ್ಬರಿಗೆ ಮಾತ್ರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರೂ ಸಂಕಷ್ಟದಲ್ಲಿದ್ದವರಿಗೆ ಎಲ್ಲರಿಗೂ ನ್ಯಾಯ ಒದಗಿಸಲಾಗಿದೆ ಎಂದು ಬೋಪಯ್ಯ ಹೇಳಿದರು.

See also  ದುರ್ಗದಹಳ್ಳಿ ದೇವಸ್ಥಾನದ ವಿಗ್ರಹ ಚೋರರ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು