News Kannada
Sunday, September 25 2022

ಕರ್ನಾಟಕ

ತೆರಿಗೆ ಪಾವತಿಸದ ಸೋಲಾರ್ ಕಂಪನಿಗೆ ನೋಟೀಸ್ - 1 min read

Photo Credit :

ತೆರಿಗೆ ಪಾವತಿಸದ ಸೋಲಾರ್ ಕಂಪನಿಗೆ ನೋಟೀಸ್

ಗುಂಡ್ಲುಪೇಟೆ: ಸೋಲಾರ್ ಕಂಪನಿಯೊಂದು ತೆರಿಗೆಯನ್ನು ಗ್ರಾ.ಪಂ.ಗೆ ಪಾವತಿಸದ ಕಾರಣ ಪಿಡಿಓ ನೋಟಿಸ್ ನೀಡಿರುವ ಘಟನೆ ತಾಲೂಕಿನ ಕೊಡಗಾಪುರ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಅಭಾವವನ್ನು ನೀಗಿಸುವ ಸಲುವಾಗ ಈ ಕಾಂಗ್ರೆಸ್  ಸರ್ಕಾರ  ಅಧಿಕಾರದಲ್ಲಿದ್ದ ವೇಳೆ ಗುಂಡ್ಲುಪೇಟೆ ತಾಲೂಕಿನಲ್ಲಿ 50 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಘಟಕವನ್ನು  ಖಾಸಗಿ ವ್ಯಕ್ತಿಗಳು ಮೂಲಕ ಸ್ಥಾಪನೆ ಮಾಡಲಾಗಿತ್ತು.

ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಗ್ರಾಮದಲ್ಲಿ 100 ಎಕರೆ ಪ್ರದೇಶದಲ್ಲಿ ಸೋಲಾರ್ ಘಟಕವನ್ನು ಕ್ಲೀನ್ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸ್ಥಾಪಿಸಿತ್ತು. ಸೋಲಾರ್ ಸ್ಥಾಪನೆಗೊಂಡ ಕೊಡಗಾಪುರ ಗ್ರಾಮವು ಸೋಮಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದೆ. ಹೀಗಾಗಿ ಈ ಘಟಕವು ತೆರಿಗೆಯನ್ನು ಗ್ರಾಪಂಗೆ ಪ್ರತಿವರ್ಷವೂ ಸಲ್ಲಿಸಲೇ ಬೇಕಾಗಿದೆ.

ಆದರೆ ಈ ಸೋಲಾರ್ ಘಟಕವು 2019ರಿಂದ 2020ನೇ ಸಾಲಿನವರಗೂ 7ಲಕ್ಷ ತೆರಿಗೆ ಪಾವತಿಸಿಲ್ಲ  ಹೀಗಾಗಿ ನೋಟಿಸ್ ನೀಡಲಾಗಿತ್ತು ಆದರೂ ಇದುವರೆಗೂ ಗ್ರಾಮ ಪಂಚಾಯಿತಿ ತೆರಿಗೆ ಪಾವತಿ ಮಾಡಿಲ್ಲ. ಈಗ ಇದರೊಂದಿಗೆ 2020-21ನೇ ಸಾಲಿನ ಎಂಟು ಲಕ್ಷ ಮತ್ತು 24 ಉಪಕರಣ ಮೊತ್ತ 1 ಲಕ್ಷ 92 ಸಾವಿರ ರೂಪಾಯಿ ಸೇರಿ ಒಟ್ಟು 9 ಲಕ್ಷದ 92ಸಾವಿರ ರೂಪಾಯಿ ತೆರಿಗೆ ಪಾವತಿ ಮಾಡಿದ್ದು, ಕ್ಲೀನ್ ಸೋಲಾರ್ ಘಟಕ  ಗ್ರಾಮ ಪಂಚಾಯಿತಿಗೆ ವಂಚನೆ ಮಾಡುತ್ತಿದೆ ಎಂದು ಗಂಭೀರವಾದ ಆರೋಪ ಕೇಳಿ ಬರುತ್ತಿದೆ.

ಇತ್ತೀಚಿನ ಸೋಮಹಳ್ಳಿ ಗ್ರಾಮ ಪಂಚಾಯಿತಿ ನೂತನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕವಾಗಿರುವ ಬಿ.ಕೆ.ಶ್ರೀನಿವಾಸ್ ಸೋಲಾರ್ ಘಟಕದ ವ್ಯವಸ್ಥಾಪಕರಿಗೆ ತೆರಿಗೆ ಪಾವತಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಒಂದು ವೇಳೆ ತೆರಿಗೆ ಪಾವತಿ ಮಾಡದಿದ್ದರೆ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ ಪ್ರಕರಣ 200ರ ನಿಯಮದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಗ್ರಾಪಂ ಪಿಡಿಓ ಬಿ.ಕೆ.ಶ್ರೀನಿವಾಸ್ ಮಾತನಾಡಿ ಕೊಡಗಾಪುರ ಸೋಲಾರ್ ಘಟಕದವರು ಎರಡು ಮೂರು ವರ್ಷದಿಂದ ಗ್ರಾಮ ಪಂಚಾಯಿತಿಗೆ ತೆರಿಗೆ ಕೊಟ್ಟಿರುವುದಿಲ್ಲ. ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿದೆ. ಇದಕ್ಕೆ ಸ್ಪಂದಿಸಿ ತೆರಿಗೆ ಹಣ ಕಟ್ಟದಿದ್ದರೆ ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದ್ದಾರೆ.

See also  ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಮುಂಬೈ ತಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು