News Kannada
Monday, October 03 2022

ಕರ್ನಾಟಕ

ಸರ್ಕಾರ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡದಿರಲಿ: ಎಚ್ಡಿಕೆ - 1 min read

Photo Credit :

ಸರ್ಕಾರ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡದಿರಲಿ: ಎಚ್ಡಿಕೆ

ಚನ್ನಪಟ್ಟಣ: ಕೊರೋನಾ ವೈರಸ್ ವಿಚಾರದಲ್ಲಿ ಸರ್ಕಾರ ಉಡಾಫೆ ಮಾಡಿ, ಲಘುವಾಗಿ ಪರಿಗಣಿಸಿ ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಪೌಳಿದೊಡ್ಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ  ಅವರು ಮುಂದಿನ ಎರಡು ತಿಂಗಳಲ್ಲಿ ಕೊರೋನಾ ಸೋಂಕು ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಿರುವಾಗ ಸರ್ಕಾರ  ಜನರ ಜೀವನದ ಜೊತೆ ಚೆಲ್ಲಾಟವಾಡದೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಮನಗರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್‍ಡಿಕೆ, ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಅಷ್ಟರಲ್ಲಿ ಏನೇನು ಆಗುತ್ತದೋ ಯಾರಿಗೆ ಗೊತ್ತು ಎಂದರು.

ನಾನು ನಿಖಿಲ್ ಕುಮಾರಸ್ವಾಮಿಗೆ ಯಾವುದೇ ಒತ್ತಡ ಹಾಕುವುದಿಲ್ಲ. ಪಕ್ಷದ ಕಾರ್ಯಕರ್ತರು, ರಾಮನಗರ ಜನರ ಭಾವನೆ ಗ್ರಹಿಸುತ್ತೇನೆ. ಈಗ ಜಿಲ್ಲೆಯಲ್ಲಿ ಮೂರು ಜನ ಜೆಡಿಎಸ್ ಶಾಸಕರಿದ್ದು, ನನಗೆ ಮತ್ತೆ ಮೂರು ಜನ ಶಾಸಕರು ಗೆಲ್ಲಬೇಕು. ಆ ದೃಷ್ಟಿಯಲ್ಲಿ ನಾನು ತೀರ್ಮಾನ ಮಾಡುತ್ತೇನೆ ಎಂದು ನಿಖಿಲ್ ಸ್ಪರ್ಧೆಯ ಸುಳಿವನ್ನು ಪರೋಕ್ಷವಾಗಿ ನೀಡಿದರು.

ಇದೇ ಸಂದರ್ಭದಲ್ಲಿ ಮರಾಠ ನಿಗಮ ಮಂಡಳಿ ವಿರುದ್ಧ ಡಿಸೆಂಬರ್ 5ಕ್ಕೆ ರಾಜ್ಯ ಬಂದ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಹಲವಾರು ಮರಾಠರು ಉಪಕಸಬು ಮಾಡಿಕೊಂಡು ಜೀವನ ಸಾಗಿಸಿಕೊಂಡು ಹೋಗುತ್ತಿದ್ದಾರೆ ಅವರು ಭಾಷೆ ವಿಚಾರದಲ್ಲಿ ಮಾತ್ರ ಮರಾಠಿಯನ್ನು ಮಾತನಾಡುತ್ತಾರೆ, ಚನ್ನಪಟ್ಟಣದಲ್ಲೂ ಮರಾಠಿಗರು ಇದ್ದಾರೆ, ಮಹಾರಾಷ್ಟ್ರದವರ ಸಣ್ಣತನದಿಂದ ಇಲ್ಲಿ ದ್ವೇಷ ಹುಟ್ಟಿಕೊಂಡಿದ್ದು, ಎರಡು- ಮೂರು ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕ್ಯಾತೆ ಇದೆ. ಅದಕ್ಕಾಗಿಯೇ ನಾನು ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿಸಿದ್ದು, ಆ ಭಾಗದಲ್ಲಿ ಅಧಿವೇಶನ ನಡೆಸಬೇಕೆಂದು ತೀರ್ಮಾನ ಮಾಡಿದ್ದೆ ಎಂದು ಹೇಳಿದರು.

ಮಹದೇಶ್ವರ ದೇವಾಲಯದ ನಿರ್ಮಾಣ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ, ವ್ಯಕ್ತಿಯೊಬ್ಬರು ಮಹದೇಶ್ವರ ದೇವಾಲಯ ಕಟ್ಟುತ್ತೇವೆಂದು ಪ್ರಚಾರ ಪಡೆಯಲು ಹೊರಟಿದ್ದಾರೆ. ಇದಕ್ಕೆ ತಾಲೂಕಿನ ಜನ ಸೊಪ್ಪು ಹಾಕುವುದು ಬೇಡ. ಈಗಾಗಲೇ ದೇವಾಲಯದ ಅಭಿವೃದ್ದಿಗೆ 2 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ದೇವಾಲಯದ ಜಾಗದ ಸರ್ವೆ ಮಾಡಲಾಗಿದ್ದು, ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಮಾಡಲಾಯಿತು. ಹಾಗೆಯೇ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್‍ಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಕರಡಿ ದಾಳಿಯಿಂದ ಗಾಯಗೊಂಡಿದ್ದ ನಗರಸಭೆ ಮಾಜಿ ಸದಸ್ಯೆ ಸಾಕಮ್ಮ ಅವರಿಗೆ 5 ಲಕ್ಷ ರೂ. ಪರಿಹಾರ ಚೆಕ್ ನೀಡಲಾಯಿತು.

ಮುಖಂಡರಾದ ಎಸ್.ಲಿಂಗೇಶ್‍ಕುಮಾರ್, ಹಾಪ್‍ಕಾಮ್ಸ್ ದೇವರಾಜು, ವಕೀಲ ಹನುಮಂತೇಗೌಡ, ತಾಲೂಕು ಅಧ್ಯಕ್ಷ ಜಯಮುತ್ತು, ನಗರ ಅಧ್ಯಕ್ಷ ರಾಂಪುರ ರಾಜಣ್ಣ, ಗ್ರಾ.ಪಂ.ಸದಸ್ಯೆ ವಿಮಲಾ, ಕೃಷ್ಣಪ್ಪ, ತಮ್ಮಯ್ಯಣ್ಣ, ಉಮಾಶಂಕರ್, ಮುದಗೆರೆ ಜಯಕುಮಾರ್, ಸಂತೋಷ್ ಸೇರಿದಂತೆ ಹಲವರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

See also  ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ: ಜನರಲ್ಲಿ ಭೀತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು