News Kannada
Sunday, October 02 2022

ಕರ್ನಾಟಕ

ಸಿಗಂದೂರು ದೇವಸ್ಥಾನದ ವಿವಾದ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - 1 min read

Photo Credit :

 ಸಿಗಂದೂರು ದೇವಸ್ಥಾನದ ವಿವಾದ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಶಿವಮೊಗ್ಗ: ಸಿಗಂದೂರು ದೇವಾಲಯಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚನೆಗೊಂಡಿರುವ ಮೇಲುಸ್ತುವಾರಿ ಹಾಗೂ ಸಲಹ ಸಮಿತಿಯನ್ನ ರದ್ದುಗೊಳಿಸಿ ಎಂದು ನಡೆಯುತ್ತಿರುವ ಹೋರಾಟದ ಮಧ್ಯೆ ಹೈಕೋರ್ಟ್  ದೇವಸ್ಥಾನವನ್ನ ಮುಜುರಾಯಿಗೆ ಸೇರಿಸುವ ಕುರಿತು ಸರ್ಕಾರಕ್ಕೆ ನೋಟೀಸ್ ನೀಡಿದೆ.

ತುಮರಿ ನಿವಾಸಿ ಲಕ್ಷ್ಮೀ ನಾರಾಯಣ ಎಂಬುವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದು ದೇವಸ್ಥಾನದ ನಿರ್ಮಾಣದ ವೇಳೆ ಹಾಗೂ ತದನಂತರದ ಅಭಿವೃದ್ಧಿಯಲ್ಲಿ ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿಕೊಳ್ಳಲಾಗಿದೆ ಹಾಗೂ ದೇವಸ್ಥಾನದಲ್ಲಿ ಬರುವ ಆದಾಯಗಳಿಗೆ ಪಾರದರ್ಶಕತೆ ತರುವ ಸಲುವಾಗಿ ಮುಜುರಾಯಿ ಇಲಾಖೆಗೆ ಸೇರಿಸುವಂತೆ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.

ಸಾರ್ವಜನಿಕ ಹಿತಾಸಕ್ತಿ ಪುರಸ್ಕರಿಸಿದ ಹೈಕೋರ್ಟ್ ಅರಣ್ಯ ಭೂಮಿ ಒತ್ತುವರಿ ಕುರಿತು ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೂ ಮುಜುರಾಯಿ ಇಲಾಖೆಗೆ ದೇವಸ್ಥಾನ ಸೇರಿಸುವ ಕುರಿತು ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.

See also  ದತ್ತ ಪೀಠ ಸಮಸ್ಯೆ ಬಗೆಹರಿಸಲು ಸಿಎಂ ಕ್ರಮವಹಿಸಬೇಕು: ಪ್ರಮೋದ್ ಮುತಾಲಿಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು