News Kannada
Wednesday, February 08 2023

ಕರ್ನಾಟಕ

ಬೀದಿ ರಂಪ ಮಾಡಿದವರಿಗೆ ಸಚಿವ ಸ್ಥಾನ ಬೇಡ: ಶಾಸಕ ಅಪ್ಪಚ್ಚುರಂಜನ್

Photo Credit :

ಬೀದಿ ರಂಪ ಮಾಡಿದವರಿಗೆ ಸಚಿವ ಸ್ಥಾನ ಬೇಡ: ಶಾಸಕ ಅಪ್ಪಚ್ಚುರಂಜನ್

ಮಡಿಕೇರಿ: ಪಕ್ಷ ನಿಷ್ಠೆ ತೋರಿದವರಿಗೆ ಸಚಿವ ಸ್ಥಾನ ನೀಡಬೇಕೆ ಹೊರತು ಬೀದಿ ರಂಪ ಮಾಡಿದವರಿಗೆ ಅಲ್ಲವೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಐದು ಬಾರಿ ಶಾಸಕನಾಗಿದ್ದು, ಪಕ್ಷಕ್ಕೆ ಕುಂದು ಬಾರದ ರೀತಿಯಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇನೆ. ನನಗೂ ಮಂತ್ರಿಸ್ಥಾನ ನೀಡಲಿ, ಈ ಬಗ್ಗೆ ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದೇನೆ ಎಂದರು. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಮತ್ತು ಐದು, ಆರು ಬಾರಿ ಗೆದ್ದವರಿಗೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

ಪಕ್ಷಕ್ಕೆ ನಿಷ್ಠೆಯಿಂದ ಬೀದಿ ರಂಪ ಮಾಡದೆ ಸುಮ್ಮನಿರುವವರನ್ನು ಕಡೆಗಣಿಸಬಾರದು.  ಐದು, ಆರು ಬಾರಿ ಗೆದ್ದವರನ್ನು ಮಂತ್ರಿ ಮಾಡಬೇಕು. ಮತ್ತೆ ಮತ್ತೆ ಮಂತ್ರಿಗಳಾಗುವವರನ್ನು ಕೈಬಿಟ್ಟು ಅವಕಾಶ ಸಿಗದೇ ಇರುವವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಪಕ್ಷದ ಘನತೆ ಗೌರವ ಉಳಿಸಿದವರಿಗೆ ಅವಕಾಶ ನೀಡದೆ ಬೀದಿ ರಂಪ ಮಾಡಿದವರಿಗೆ ಅವಕಾಶ ಕಲ್ಪಿಸಿದರೆ ಅರ್ಥವಿಲ್ಲ ಎಂದು ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು.

See also  ಸನ್ನಡತೆ ಆಧಾರದ ಮೇಲೆ ನಾಳೆ 172 ಜನ ಖೈದಿಗಳ ಬಿಡುಗಡೆ: ಗೃಹ ಸಚಿವ ಪರಮೇಶ್ವರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು