ಮೈಸೂರು: ಮಹಾಮಾರಿ ಕೋರೊನಾ ಸೋಂಕು ರಾಜ್ಯದಿಂದ ತೊಲಗಿ ರಾಜ್ಯದ ಜನತೆ ಆರೋಗ್ಯವಂತರಾಗಿ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಪುತ್ರ, ಶಾಸಕ ಡಾ.ಯತಿಂದ್ರ ಸಿದ್ದರಾಮಯ್ಯನವರು ಪಾದಯಾತ್ರೆಯ ಮೂಲಕ ನಾಗಮಲೆ ಯಿಂದ ಮಾದಪ್ಪನ ಬೆಟ್ಟದವರೆಗೆP ತೆರಳಿ ಮಾದಪ್ಪನ ದರ್ಶನ ಪಡೆದ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಾಮಾರಿ ಕೋರೊನಾ ಸೋಂಕು ರಾಜ್ಯದ ಎಲ್ಲ ಕಡೆ ಹರಡಿ ರಾಜ್ಯದ ಜನತೆ ಸಾವು-ನೋವುಗಳಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗನೆ ಈ ಮಹಾಮಾರಿ ವೈರಸ್ ಸೋಂಕು ರಾಜ್ಯದಿಂದ ತೊಲಗಲಿ ರಾಜ್ಯದ ಜನತೆ ಆರೋಗ್ಯದಿಂದ ನೆಮ್ಮದಿಯ ಜೀವನವನ್ನು ಹಿಂದಿನಂತೆ ನಡೆಸುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರಲ್ಲದೆ, ನಾವು ಪ್ರತಿವರ್ಷವೂ ದೇವರ ದರ್ಶನವನ್ನು ಪಡೆದು ರಾಜ್ಯದ ಒಳಿತಿಗಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು.