ಕಾರವಾರ: ಕಳೆದ ತಿಂಗಳು ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಬಳಿಯ ಡ್ರೈನ್ ಹೋಟಲ್ ನಲ್ಲಿ ನಿಲ್ಲಿಸಿದ್ದ ಬೈಲೆಟ್ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಕಾರವಾರ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಕಾರಿಪುರ ಮೂಲದ ಸೈಯದ್ ಇಸ್ರಾರ್ ಕರೀಮ್ ಸಾಬ್ ಬಂಧಿತ ವ್ಯಕ್ತಿ. ಈ ಹಿಂದೆ ಮುಂಡಗೋಡಿನ ಅರಣ್ಯ ಇಲಾಖೆ ಪ್ರಕರಣದಲ್ಲಿ ಬಂಧಿಯಾಗಿದ್ದ ಈತನಿಗೆ ಕೊರೊನಾ ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿತ್ತು. ಇದರಿಂದ ಆತನನ್ನು ಮುಂಡಗೋಡದಿಂದ ಕಾರವಾರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಾರವಾರದ ಕಿಮ್ಸ್ ನಿಂದ ತಪ್ಪಿಸಿಕೊಂಡು ಕಡಲತೀರ ಬಳಿ ಇದ್ದ ಬುಲೆಟ್ ಕಟ್ಟು ಪರಾರಿಯಾಗಿದ್ದ. ಬಳಿಕ ತನಿಖೆ ಕೈಗೊಂಡಿದ್ದ ಕಾರವಾರ ಪೊಲೀಸರು ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ, ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಶೆಟ್ಟಿ, ನಗರ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಕುಮಾರ್, ಎಸ್. ಬಿ. ಪೂಜಾರಿ, ಸತ್ಯಾನಂದ ನಾಯ್ಕ ಮಂಜುನಾಥ ಗೊಂಡ, ಮುರಳೀಧರ ನಾಯ್ಕ, ರಾಜೇಶ ನಾಯ್ಕ, ರಾಮಾ ನಾಯ್ಕ, ಮಹೇಶ ನಾಯ್ಕ ಇದ್ದರು. ಪ್ರಕರಣದ ತನಿಖೆ ಮುಂದುವರಿದಿದೆ.