News Kannada
Tuesday, February 07 2023

ಕರ್ನಾಟಕ

ಕೆ.ಆರ್.ಪೇಟೆ ಬಳಿ ಹಾವು ಕಚ್ಚಿ ಯುವಕ ಸಾವು

Photo Credit :

ಕೆ.ಆರ್.ಪೇಟೆ ಬಳಿ ಹಾವು ಕಚ್ಚಿ ಯುವಕ ಸಾವು

ಕೆ.ಆರ್.ಪೇಟೆ: ಹಾವು ಕಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಬೂವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೂವನಹಳ್ಳಿ ಗ್ರಾಮದ ನಿವಾಸಿ ಅಜಯ್ (23) ಮೃತಪಟ್ಟವನು. ಈತ ದನಕರುಗಳಿಗೆ ಹುಲ್ಲು ತರಲು ಜಮೀನಿಗೆ ಹೋಗಿದ್ದಾಗ ಜಮೀನಿನಲ್ಲಿದ್ದ ಹಾವು ಕಡಿದಿದೆ. ಆ ನಂತರ ವಿಷಯ ತಿಳಿದು ಮನೆಯವರು ಆತನನ್ನು ಪಟ್ಟಣದ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರಾದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ  ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ  ಹಾವು ಕಡಿತದಿಂದ ಮೃತಪಟ್ಟ ವ್ಯಕ್ತಿಗೆ ಸರ್ಕಾರ ಕೃಷಿ ಮತ್ತು ಎಪಿಎಂಸಿ ಇಲಾಖೆಗಳ ಮೂಲಕ ಪರಿಹಾರ ನೀಡಬೇಕೆಂದು ವಕೀಲ ನಾಗೇಶ್, ಬಳ್ಳೇಕೆರೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಚೌಡೇನಹಳ್ಳಿ ನಾಗರಾಜು, ಬೂವನಹಳ್ಳಿ ರೇವಣ್ಣ, ಸೇರಿದಂತೆ ರೈತ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ಹಾವು ಕಡಿದು ರೈತರು ಸಾಯುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ರೈತರು ಜಮೀನಿಗೆ ತೆರಳುವ ಸಂದರ್ಭ ಎಚ್ಚರಿಕೆಯಿಂದ ಇರುವುದು ಒಳಿತು.

See also  ೫೦ರ ವಯಸ್ಸಿನಲ್ಲಿ ೪ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು