ಚಾಮರಾಜನಗರ: ಎಚ್.ವಿಶ್ವನಾಥ್ ಅವರು ಸಚಿವರಾಗಬೇಕೆನ್ನುವ ಬಯಕೆ ನಮಗೆಲ್ಲ್ಲ ಇತ್ತು. ಆದರೆ ಹೈಕೋರ್ಟ್ ನೀಡಿರುವ ಆದೇಶ ಶಾಕ್ ನೀಡಿದೆ. ಇದರಿಂದ ಅವರು ಧೃತಿ ಗೆಡುವುದು ಬೇಡ, ಸಿಎಂ ಹಾಗೂ ವರಿಷ್ಟರು ಅಪೀಲ್ ಹೋಗುವ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಅವರು ಎದೆಗುಂದುವುದು ಬೇಡ ಎಂದು ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಕೊಳ್ಳೇಗಾಲದಲ್ಲಿ ಬಿಜೆಪಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್ ಹಾಗೂ ಗೋಪಾಲಯ್ಯ ಅವರು ಎಚ್.ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು, ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಎಚ್.ವಿಶ್ವನಾಥ್ ಪರ ಸರ್ಕಾರ ಮತ್ತು ಪಕ್ಷ ಇರಲಿದೆ. ಅಡ್ವಕೇಟ್ ಜನರಲ್ ಕೂಡ ಸಮರ್ಪಕವಾಗಿ ವಾದಿಸಿದ್ದಾರೆ, ನೋವಿನಿಂದಷ್ಟೇ ವಕೀಲರ ವಿರುದ್ಧ ಅವರು ಕಿಡಿಕಾರಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸುವೆ ಎಂದು ಹೇಳಿದರು.
ಮತ್ತೋರ್ವ ಸಚಿವ ಕೆ.ಎನ್.ಗೋಪಾಲಯ್ಯ ಮಾತನಾಡಿ, ಎಚ್.ವಿಶ್ವನಾಥ್ ಅವರೊಂದಿಗೆ ಸದಾ ನಾವು ಇರುತ್ತೇವೆ. ಯಾರೂ ಅವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ ಸಭೆ ಸೇರಿ ಕಾನೂನು ಹೋರಾಟ ಮುಂದುವರೆಸುವ ಬಗ್ಗೆ ಶೀಘ್ರ ಚರ್ಚಿಸುವುದಾಗಿ ತಿಳಿಸಿದರು.