ಶಿವಮೊಗ್ಗ: ಗೋಹತ್ಯೆ ತಡೆಯುತ್ತಾನೆ ಎಂಬ ಕಾರಣಕ್ಕಾಗಿ ಬಜರಂಗದಳದ ಸಹಸಂಚಾಲಕ ನಾಗೇಶ್ ಮೇಲೆ ನಾಲ್ವರು ಮುಸ್ಲಿಂ ಗೂಂಡಗಳು ದಾಳಿ ಮಾಡಿದ್ದಾರೆ. ನಾಗೇಶ್ ತೀವ್ರವಾಗಿ ಗಾಯಗೊಂಡಿರುವುದು ಕಂಡುಬಂದಿದೆ. ಬುಧವಾರ ನಡೆದ ಈ ಘಟನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಗೂಂಡಗಳ ಮೇಲೆ ಹಾಗೂ ಘಟನೆಯ ವಿರುದ್ಧ ಕಿಡಿಕಾರಿದ್ದಾರೆ.
ಪ್ರತಿಯೊಬ್ಬರ ತಾಳ್ಮೆಗೂ ಒಂದು ಮಿತಿ ಇರುತ್ತದೆ. ಆ ಕಟ್ಟೆ ಹೊಡೆದರೆ ಪರಿಸ್ಥಿತಿ ಎಲ್ಲರಿಗೂ ಎದುರಿಸಲು ಕಷ್ಟವಾಗುತ್ತದೆ. ಮುಸ್ಲಿಂ ಗೂಂಡಗಿರಿಯಿಂದ ಶಿವಮೊಗ್ಗದಲ್ಲಿ ವ್ಯಾಪಾರ ನಷ್ಟವಾಗಿದೆ. ಈ ಹಿಂದೆಯೂ ಹಲವಾರು ಬಾರಿ ಮುಸ್ಲಿಂ ಗೂಂಡಾಗಳು ಗಲಭೆಯಂತಹ ಕುಕೃತ್ಯಗಳನ್ನು ಮಾಡಿದ್ದರು ಹಿಂದೂ ಸಮಾಜದ ಯುವಕರನ್ನು ನಾವು ಸಮಾಧಾನ ಮಾಡುತ್ತಲೇ ಬಂದಿದ್ದೆವು. ಶಿವಮೊಗ್ಗದಲ್ಲಿ ಶಾಂತಿ ನೆಲೆಸುವುದು ಇವರಿಗೆ ಇಷ್ಟವಿಲ್ಲ ಎಂಬಂತೆ ಕಾಣುತ್ತಿದೆ ಎಂದು ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಮುಂದುವರಿಸಿ ಮಾತನಾಡಿದ ಅವರು, ಕಿಡಿಗೇಡಿಗಳಿಗೆ ಆ ಸಮುದಾಯದ ಮುಖಂಡರು ಬುದ್ಧಿ ಹೇಳಬೇಕು ಹಾಗೂ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ನಮ್ಮ ಸರ್ಕಾರವೇ ಅವರಿಗೆ ಬುದ್ದಿಕಲಿಸಿ ಶಿಕ್ಷೆ ನೀಡುತ್ತದೆ. ಘಟನಾವಳಿಗಳಲ್ಲಿ ಹಿಂದೂ ಯುವಕರ ಯಾವುದೇ ತಪ್ಪು ಕಾಣುತ್ತಿಲ್ಲ ಎಂದು ಹೇಳಿದರು.