ಮಡಿಕೇರಿ ; ನಾಗರಹೊಳೆ ಸಮೀಪದ ಶ್ರೀಮಂಗಲ ಗ್ರಾಮದಲ್ಲಿ ಹುಲಿಯೊಂದು ತೆರೆದ ಬಾವಿಗೆ ಬಿದ್ದು ಮೃತಪಟ್ಟಿದೆ. ಈ ಹುಲಿಯು ಸುಮಾರು ೪-೫ ದಿನಗಳ ಹಿಂದೆ ಬಾವಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಈ ಬಾವಿಯು ಗಣೇಶ ಎಂಬುವವರಿಗೆ ಸೇರಿದ್ದಾಗಿದ್ದು ನೀರು ಬತ್ತಿ ಹೋಗಿತ್ತು. ಆಹಾರ ಅರಸಿ ನಾಡಿಗೆ ಬಂದಿರುವ ಹುಲಿಯು ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಈ ಭಾಗದಲ್ಲಿ ರೈತರ ಜಾನುವಾರುಗಳನ್ನು ಹುಲಿಯು ಕೊಂದು ಹಾಕುತ್ತಿದೆ.
ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.