ಕಾಸರಗೋಡು : ಗ್ರನೇಡ್ ( ಅಶ್ರುವಾಯು) ಸ್ಪೋಟಗೊಂಡು ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ನಡೆದಿದೆ.
ಗಾಯಗೊಂಡ ಸುಧಾಕರ ನ್ ( 45) ಹಾಗೂ ಪವಿತ್ರನ್ ( 45) ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನಲೆಯಲ್ಲಿ ತರಬೇತಿ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಗ್ರನೇಡ್ ಸ್ಪೋಟಿಸಿ ಈ ಅವಘಡ ನಡೆದಿದೆ .
ಈ ಪೈಕಿ ಸುಧಾಕರ ರವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ . ಸುಧಾಕರ ನ್ ರವರನ್ನು ಕೋಜಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಪವಿತ್ರನ್ ರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತರಬೇತಿಯ ಬಳಿಕ ಮೈದಾನದಲ್ಲಿ ಸ್ವಚ್ಛಗೊಳಿಸುತ್ತಿದ್ದಾಗ ಸಿಡಿಯದೇ ಉಳಿದಿದ್ದ ಶೆಲ್ ಸ್ಪೋಟಗೊಂಡು ಈ ಘಟನೆ ನಡೆದಿದೆ ಎನ್ನಲಾಗಿದೆ .
ಗಾಯಗೊಂಡ ಇಬ್ಬರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀ ದಲಾಯಿತು ಈ ಪೈಕಿ ಸುಧಾಕರನ್ ರನ್ನು ಹೆಚ್ಚಿನ ಚಿಕಿತ್ಸೆಗೆ ಕೋಜಿಕ್ಕೋಡ್ ಆಸ್ಪತ್ರೆಗೆ ಕೊಂಡೊಯ್ಯಲಾ ಯಿತು .
ಡಿ . 14 ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆ ಹಿನ್ನಲೆಯಲ್ಲಿ ನಿನ್ನೆಯಿಂದ ಪೊಲೀ ಸ್ ಅಧಿಕಾರಿಗಳಿಗೆ ತರಬೇತಿ ಆರಂಭಗೊಂಡಿತ್ತು . ತರಬೇತಿಯ ಸಂದರ್ಭದಲ್ಲಿ ಸಿಡಿಸಿದ್ದ ಅಶ್ರುವಾಯು ಶೆಲ್ ನ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ ಸ್ಫೋಟ ನಡೆದಿದೆ.
ಘಟನೆ ಬಗ್ಗೆ ಕರ್ತವ್ಯ ಲೋಪ ಉಂಟಾಗಿದೆಯೇ ಎಂಬ ಬಗ್ಗೆ ತನಿಖೆ ಆರಂಭಗೊಂಡಿದೆ.