ಮೈಸೂರು: ವೃದ್ಧರೋರ್ವರು ನಿಧನರಾಗಿ ಮನೆಯ ಮುಂದೆ ಅವರ ಮೃತದೇಹವನ್ನು ಇರಿಸಿಕೊಂಡಿರುವಾಗಲೇ ಮೂವರು ಪುಂಡರು ಲಾಂಗ್ ಹಿಡಿದು ಮನೆಯವರಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಘಟನೆ ಇಲ್ಲಿನ ಚಾಮರಾಜ ಮೊಹಲ್ಲಾದ ಕಾಕರವಾಡಿಯಲ್ಲಿ ನಡೆದಿದೆ.
ಈ ಪುಂಡಾಟಿಕೆ ಮೆರೆದ ಸಂತೋಷ್ , ವಿಲ್ಸನ್ ಮತ್ತು ಆದರ್ಶ ಎಂಬವರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿನ ನಿವಾಸಿ ನವೀದ್ ಉಲ್ಲಾ(30) ಅವರು ತಮ್ಮ ಸಂಬಂಧಿಕರೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಎಂ.ಜಿ.ರಸ್ತೆಯಲ್ಲಿ ಈ ಮೂವರು ಆರೋಪಿಗಳು ತಡೆದು ಗಲಾಟೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಸಂಬಂಧಿಕರು ಮೃತಪಟ್ಟ ನಂತರ ವಾಪಸ್ ಕಾಕರವಾಡಿಯ ಮೃತರ ನಿವಾಸಕ್ಕೆ ಶವ ತಂದಿರಿಸಿದಾಗಲೂ ಹಿಂದೆಯೇ ಬಂದ ಈ ಮೂವರು ಲಾಂಗ್ ಹಿಡಿದು ಹೊಡೆದಿದ್ದಾರೆ.
ಈ ಸಮಯದಲ್ಲಿ ಸ್ಥಳೀಯರು ಕೂಡ ಆರೋಪಿಗಳಿಗೆ ಪ್ರತಿಯಾಗಿ ಹೊಡೆದು ಕಳುಹಿಸಿದ್ದಾರೆ. ಗಲಾಟೆಯಲ್ಲಿ ಸಯ್ಯದ್ ಅಜಂ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದು, ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.