News Kannada
Monday, January 30 2023

ಕರ್ನಾಟಕ

ಗ್ರಾ. ಪಂ. ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ  ಎರಡು ಹಂತದ ಮತದಾನ

Photo Credit :

ಗ್ರಾ. ಪಂ. ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ  ಎರಡು ಹಂತದ ಮತದಾನ

ಕಾರವಾರ: ಜಿಲ್ಲೆಯಲ್ಲಿ ಡಿ.22 ಮತ್ತು 27ರಂದು ಎರಡು ಹಂತಗಳಲ್ಲಿ ಗ್ರಾಮಪಂಚಾಯತ್  ಚುನಾವಣೆ ನಡೆಸಲಾಗುತ್ತಿದ್ದು,  ಮೊದಲನೆಯ ಹಂತದ ಚುನಾವಣೆಗೆ ಡಿ.7 ರಿಂದ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಗ್ರಾಮಪಂಚಾಯತ್ ಚುನಾವಣೆ ಕುರಿತು ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ, ಮೊದಲನೆಯ ಹಂತದ ಚುನಾವಣೆಗೆ ಜಿಲ್ಲೆಯ 5 ತಾಲೂಕುಗಳ 101 ಗ್ರಾಮ ಪಂಚಾಯತಗಳಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 698 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.  ಪ್ರತಿ 10-15 ಮತಗಟ್ಟೆಗಳಿಗೆ ಸೆಕ್ಟರ್ ಆಫೀಸರ್ ಮತ್ತು ಸೆಕ್ಟರ್ ಹೆಲ್ತ್ ರೆಗ್ಯುಲೆಟರ್, ಪ್ರತಿ ತಾಲೂಕಿಗೆ ಫ್ಲಾಯಿಂಗ್ ಸ್ಕ್ಯಾಡ್, ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ್ ನೆತ್ರತ್ವದಲ್ಲಿ ಮಾದರಿ ನಿತಿಸಂಹಿತೆಯ ತಂಡವನ್ನು  ರಚಿಸಲಾಗಿದ್ದು, ಈ ತಂಡದಲ್ಲಿ ತಾಲೂಕ್ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ, ಪೊಲೀಸ್ ವೃತ್ತ ನೀರಿಕ್ಷಕ ,ಪೊಲೀಸ್ ಸಬ್ ಇನ್ಸ್ಪೆಕ್ಟರ್ , ಕಂದಾಯ ನೀರಿಕ್ಷಕ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಮೊದಲನೆ ಹಂತದ ಚುನಾವಣೆಗಾಗಿ ಈಗಾಗಲೇ ಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಡಿ.11 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಡಿ.12 ರಂದು ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದರೆ, ಡಿ.14 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.  ಡಿ.22 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರಗೆ ಮತದಾನ ನಡೆಯಲಿದ್ದು ಡಿ. 30 ರಂದು ಆಯಾ ತಾಲೂಕ ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಗುವುದೆಂದರು.

ಮೊದಲ ಹಂತದ ಚುನಾವಣೆಯಲ್ಲಿ ಕಾರವಾರ, ಅಂಕೋಲಾ ,ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಗ್ರಾಮಪಂಚಾಯತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ  ಹೊನ್ನಾವರ ತಾಲೂಕಿನ ಗ್ರಾಮಪಂಚಾಯತಗಳ ಪೈಕಿ ಹೊನ್ನಾವರ ತಾಲೂಕಿನ (ಗುಳದಕೇರಿ)ಮಂಕಿ-ಎ (ಹಳೇಮಠ), ಮಂಕಿ ಬಿ (ಅನಂತವಾಡಿ) ಮತ್ತು ಮಂಕಿ-ಸಿ(ಚಿತ್ತಾರ) ಗ್ರಾಮ ಪಂಚಾಯತಗಳನ್ನು ಹೊರತುಪಡಿಸಿ ಚುನಾವಣೆ ನಡೆಸಲಾಗುವುದು. ಮಂಕಿ ಗ್ರಾಮಪಂಚಾಯತವನ್ನು ಪಟ್ಟಣ ಪಂಚಾಯತವನ್ನಾಗಿ ಮೇಲ್ರ್ದಜೆ ಎರಿಸಲು ಸರಕಾರವು ಅಧಿಸೂಚನೆ ಹೊರಡಿಸುವುದರಿಂದ ಚುನಾವಣೆಯನ್ನು ಆಯೋಗವು ಕೈ ಬಿಟ್ಟಿರುತ್ತದೆ ಎಂದು ತಿಳಿಸಿದರು.

ಡಿ.31 ವರೆಗೆ ನೀತಿಸಂಹಿತೆ   :  ಚುನಾವಣೆ ನಡೆಯುವ ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ ಡಿ.31 ರ ವರೆಗೆ ನೀತಿಸಂಹಿತೆ ಜಾರಿಯಲ್ಲಿರುವುದು ಪಟ್ಟಣ ಪಂಚಾಯಿತಿ ಪುರಸಭೆ , ನಗರಸಭೆ ನಗರ ಪಾಲಿಕೆಯ ಪ್ರದೇಶಗಳಿಗೆ ಈ ನೀತಿಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೊಲೀಸ್ ಬಿಗಿ ಬಂದೋಬಸ್ತ್

ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಮೊದಲ ಹಂತದ ಚುನಾವಣೆಯಲ್ಲಿ 53 ಅತೀ ಸೂಕ್ಷ್ಮ 164 ಸೂಕ್ಷ್ಮ ಮತ್ತು 513 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನವಣೆ ಸಂದರ್ಭದಲ್ಲಿ ಗಲಭೆ ಅಥವಾ ಚುನಾವಣೆ ಕರ್ತವ್ಯಗಳಿಗೆ ಅಡ್ಡಿಪಡಿಸಬಹುದಾದ ಸಮಾಜಘಾತಕ ವ್ಯಕ್ತಿಗಳನ್ನು ಈಗಾಗಲೇ ಪಟ್ಟಿಮಾಡಿ ಅವರ ಮೇಲೆ ಸೂಕ್ತ ನಿಗಾವಹಿಸಲಾಗಿದ್ದು ಮುಂಜಾಗ್ರತೆಯ ಕ್ರಮವಾಗಿ ಭದ್ರತಾ ಕಾಯಿದೆಯ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು

See also  ದರ್ಶನ ನೀಡದ ಕುಮಾರಸ್ವಾಮಿ : ರೆಸಾರ್ಟ್ ವಾಸ್ತವ್ಯಕ್ಕೆ ಟೀಕೆ, ಸಮರ್ಥನೆ

ಪ್ರತಿ ಮತಗಟ್ಟೆ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಗಳನ್ನು ಅವಶ್ಯಕತೆ ಅನುಗುಣವಾಗಿ ನೇಮಿಸಲಾಗುವುದು. ಡಿ.ಎಸ್.ಪಿ 5,  ಸಿ.ಪಿ.ಐ/ಪಿಐ-17, ಪಿಎಸ್‍ಐ-70, ಎಎಸ್‍ಐ-160, ಎಚ್‍ಸಿ/ಪಿಸಿ-1160 ಪೊಲೀಸ್ ಅಧಿಕಾಅರಿ/ಸಿಬ್ಬಂದಿ,  15 ಡಿಎಆರ್ ತುಕಡಿಗಳು ಮತ್ತು 6 ಕೆಎಸ್‍ಆರ್‍ಪಿ ತುಕಡಿಗಳನ್ನು ಹಾಗೂ ಸುಮಾರು 400 ಗೃಹರಕ್ಷಕ ದಳದ ಸಿಬ್ಬಂದಿಯನ್ನು ಚುನವಣಾ ಕರ್ತವ್ಯಕ್ಕೆ  ನಿಯೋಜಿಸಲಾಗುವುದು. ಜಿಲ್ಲೆಯಾದ್ಯಂತ 54 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು ಚುನಾವಣಾ ಅಕ್ರಮಗಳ ಬಗ್ಗೆ ನೀತಿಸಂಹಿಯಂತೆ ನಿಗಾವಹಿಸೆದೆ ಎಂದರು.

 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಪ್ರಿಯಾಂಗಾ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್. ಕೆ. ಅವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು