ಚಾಮರಾಜನಗರ: ಇಲ್ಲಿಗೆ ಸಮೀಪದ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರವನ್ನು ಮೂರು ದಿನ ಬಂದ್ ಮಾಡಲಾಗುವುದು. ಕೊನೆಯ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಬರುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಪ್ರವೇಶ ನಿರ್ಬಂದಿಸಿದೆ.
ಕೊರೊನಾ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು ಹೀಗಾಗಿ ಡಿ.12 ರಿಂದ ಡಿ.14 ರ ವರೆಗೆ ಮಾದಪ್ಪನ ದರ್ಶನ ವಂಚಿತರಾಗಬೇಕಿದೆ. ಎಣ್ಣೆ ಮಜ್ಜನ, ತೆಪ್ಪೋತ್ಸವ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿತ್ತು. ಆದರೆ ಈ ಬಾರಿ ವಿಶೇಷ ಪೂಜೆಗಳಿಗೆ ಭಾಗವಹಿಸಲು ಕೂಡ ಭಕ್ತರಿಗೆ ದೇವಾಲಯ ಪ್ರಾಧಿಕಾರ ಅವಕಾಶ ಕೊಟ್ಟಿಲ್ಲ.