News Kannada
Friday, February 03 2023

ಕರ್ನಾಟಕ

ಮೂಲಸೌಕರ್ಯ ವಂಚಿತ ಕೆ.ಆರ್.ಪೇಟೆಯ ಕ್ರೀಡಾಂಗಣ

Photo Credit :

ಮೂಲಸೌಕರ್ಯ ವಂಚಿತ ಕೆ.ಆರ್.ಪೇಟೆಯ ಕ್ರೀಡಾಂಗಣ

ಕೆ.ಆರ್.ಪೇಟೆ: ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣ ಸ್ಥಾಪನೆಯಾಗಿ ಹತ್ತು ವರ್ಷಗಳು ಕಳೆದರೂ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿರುವುದು ಎದ್ದು ಕಾಣುತ್ತಿದೆ.

ಈ ಕ್ರೀಡಾಂಗಣಕ್ಕೆ ಮುಂಜಾನೆಯ ವಾಯುವಿಹಾರಕ್ಕಾಗಿ ನೂರಾರು ಸಂಖ್ಯೆಯಲ್ಲಿ ಜನ ಪ್ರತಿ ದಿನ ಬರುತ್ತಿರುತ್ತಾರೆ. ಕೆಲವರಂತು ಮುಂಜಾನೆ 4.30ಕ್ಕೆ ಕ್ರೀಡಾಂಗಣ ಪ್ರವೇಶಿಸುತ್ತಾರೆ. ಆದರೆ ಇಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸದ ಕಾರಣದಿಂದಾಗಿ ಕತ್ತಲು ಆವರಿಸಿಕೊಂಡಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಗೆ ಯಾವ ದಿಕ್ಕಿನಿಂದಲೂ ಒಂದೇ ಒಂದು ವಿದ್ಯುತ್ ದೀಪದ ವ್ಯವಸ್ಥೆ ಮಾಡಿಲ್ಲ. ಈ ಕ್ರೀಡಾಂಗಣ ದೊಡ್ಡದಾಗಿದ್ದು, ಇಲ್ಲಿ ಹೈಮಾಸ್ಕ್ ದೀಪವನ್ನು ಅಳವಡಿಸಿದರೆ ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕತ್ತಲಾಗಿರುವುದರಿಂದ ಜತೆಗೆ ಸಾರ್ವಜನಿಕರು ಇತ್ತ ಸುಳಿಯದ ಕಾರಣದಿಂದ  ರಾತ್ರಿಯಾಗುತ್ತಿದ್ದಂತೆ ಕೆಲವರು ಇಲ್ಲಿ ಕುಳಿತು ಮಧ್ಯ ಸೇವಿಸಿ ಪಾರ್ಟಿ ಮಾಡುವುದರಲ್ಲದೆ, ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ ಕವರ್‍ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದು ಸಾಮಾನ್ಯವಾಗಿದೆ. ಇದರಿಂದ ಕ್ರೀಡಾಂಗಣಕ್ಕೆ ಧಕ್ಕೆಯಾಗಿದ್ದು, ಅಶುಚಿತ್ವ ತಾಂಡವವಾಡುವಂತಾಗಿದೆ.

ಇನ್ನು ಇಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ  ಶೌಚಾಲಯವನ್ನು ನಿರ್ಮಿಸಲಾಗಿದ್ದರೂ ಇದು ಸಾರ್ವಜನಿಕರ ಬಳಕೆಗೆ ಸಿಕ್ಕಿಲ್ಲ. ಶೌಚಾಲಯದ ಬೀಗ ತೆಗೆಯದೆ ಇರುವುದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ  ಮಲಮೂತ್ರ ವಿಸರ್ಜನೆ ಮಾಡಿ ಪರಿಸರ ಹಾಳಾಗುತ್ತಿದೆಯಲ್ಲದೆ, ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ. ಇದರಿಂದ ವಾಯುವಿಹಾರಕ್ಕೆ ಬರುವ ಜನರಲ್ಲಿ ಅಸಹ್ಯ ಹುಟ್ಟಿಸುತ್ತಿದೆ.

ಈ ಕ್ರೀಡಾಂಗಣದಲ್ಲಿ ಹಲವಾರು ಕ್ರೀಡಾಕೂಟ ಸೇರಿದಂತೆ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳಿಗೆ ಆಗಮಿಸುವ ಕ್ರೀಡಾಪಟುಗಳು ಮತ್ತು ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಇಷ್ಟೇ ಅಲ್ಲದೆ, ಕ್ರೀಡಾಂಗಣದ  ಮೇಲ್ಛ್ಚಾವಣಿಯ ಒಂದು ಭಾಗದ ಶೀಟ್ ಗಾಳಿಗೆ ಹಾರಿ ಹೋಗಿ ಹಲವಾರು ವರ್ಷಗಳೇ ಕಳೆದಿದ್ದರೂ  ಅದನ್ನು ಸರಿಪಡಿಸುವ ಕೆಲಸಕ್ಕೆ ಸಂಬಂಧಿಸಿದವರು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ಒಬ್ಬರು ದೈಹಿಕ ಶಿಕ್ಷಕರನ್ನು ನಿಯೋಜಿಸಿದ್ದು ಇನ್ನುಳಿದಂತೆ ಯಾವುದೇ ಖಾಯಂ ಸಿಬ್ಬಂದಿ ಇಲ್ಲದಿರುವುದರಿಂದ ಕ್ರೀಡಾಂಗಣಕ್ಕೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು, ಅನೈತಿಕ ಚಟುವಟಿಕೆಗಳಿಗೂ ದಾರಿಮಾಡಿಕೊಟ್ಟಂತಾಗಿದೆ. ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಾಗೂ ಖೋಖೋ, ಉದ್ದಜಿಗಿತ, ಹಾಕಿ ಬಿಟ್ಟರೆ ಬೇರೆ ಬೇರೆ ಕ್ರೀಡೆಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆಗಳನ್ನು ಕಲ್ಪಿಸದಿರುವುದು ಕ್ರೀಡಾಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕಾಗಿರುವುದು ಅಗತ್ಯವಾಗಿದೆ.

ಕ್ರೀಡಾಂಗಣದ ಈಶಾನ್ಯ ಭಾಗದಲ್ಲಿ ಹುಲ್ಲು ಮಂಡಿಯುದ್ದ ಬೆಳೆದಿದ್ದು, ದನಕರುಗಳನ್ನು ಸಾಕಿದವರು ಬಂದು ಹುಲ್ಲನ್ನು ಕೊಯ್ದುಕೊಂಡು ಹೋಗುತ್ತಿದ್ದು, ಉಳಿದ ಕಡೆಗಳಲ್ಲಿ ವಿಷ ಜಂತುಗಳು ವಾಸಿಸುತ್ತಿದ್ದರೂ ಕಾಣಿಸುವುದೇ ಇಲ್ಲವಾಗಿದೆ. ಈಗಾಗಲೇ ಹತ್ತಾರು ಸಮಸ್ಯೆಗಳಿಂದ ಕೂಡಿರುವ ತಾಲೂಕು ಕ್ರೀಡಾಂಗಣದತ್ತ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸುಸಜ್ಜಿತ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕ್ರೀಡಾಸಕ್ತರಿಗೆ ಹಾಗೂ ನಾಗರಿಕರಿಗೆ ಉತ್ತಮವಾದ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಉಸ್ತುವಾರಿ ಸಚಿವ ನಾರಾಯಣಗೌಡರು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಕ್ರೀಡಾಂಗಣಕ್ಕೊಂದು ಹೊಸತನ ನೀಡುವುದು ಅಗತ್ಯವಾಗಿದೆ.

See also  ಸಿಎಂ ವಿರುದ್ಧ ಬಿಜೆಪಿ ದೂರು ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು