ಕಾಸರಗೋಡು: ಮೂರು ಕಿಲೋ ಗಾಂಜಾ ಸಹಿತ ಓರ್ವನನ್ನು ಕುಂಬಳೆ ಅಬಕಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಜೇಶ್ವರ ಪಾವೂರಿನ ರಾಜೇಶ್ (30 ) ಎಂದು ಗುರುತಿಸಲಾಗಿದೆ.
ತಪಾಸಣೆ ನಡೆಸುತ್ತಿದ್ದಾಗ ಮಂಜೇಶ್ವರ ಗೇರುಕಟ್ಟೆಯಲ್ಲಿ ಬೈಕನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಬೈಕ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ, ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನಲೆಯಲ್ಲಿ ಹೊರ ರಾಜ್ಯ ಗಳಿಂದ ಅಕ್ರಮ ಮದ್ಯ , ಗಾಂಜಾ ಸೇರಿದಂತೆ ಅಕ್ರಮ ಸಾಗಾಟ ಕ್ಕೆ ಕಡಿವಾಣ ಹಾಕಲು ಗಡಿ ಪ್ರದೇಶದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.