ದಾವಣಗೆರೆ: ಕಾಗಿನೆಲೆ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕುರುಬರ ಹೋರಾಟವಿದು. ಇದರಲ್ಲಿ ಆರ್ ಎಸ್ ಎಸ್ ಯಾವುದೇ ಹಸ್ತಕ್ಷೇಪವಿಲ್ಲ. ಎಡಪಂಥೀಯರು ವಿನಾಕಾರಣ ಆರ್ ಎಸ್ ಎಸ್ ಹೆಸರನ್ನು ತೆಗೆಯುತ್ತಿದ್ದಾರೆ. ಇದರಿಂದಲೇ ಸ್ಪಷ್ಟವಾಗುತ್ತಿದೆ ಆರ್ ಎಸ್ ಎಸ್ ಮೇಲೆ ಅವರಿಗಿರುವ ಭಯ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಆರ್ ಎಸ್ ಎಸ್ ನಮ್ಮಂತಹ ಹಲವಾರು ದೇಶಭಕ್ತರನ್ನು ಸೃಷ್ಟಿಸಿದ. ಎಡಪಂಥೀಯರಿಗೆ ಸಮಯ ಸಿಕ್ಕಾಗಲೆಲ್ಲಾ ಅದನ್ನು ದೂಷಿಸಲು ಸಜ್ಜಾಗಿರುತ್ತಾರೆ. ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ ಎಂಬಂತೆ ಇವರಿಗೆ ಪ್ರತಿ ಕೆಲಸದಲ್ಲೂ ಪ್ರತಿ ಹೋರಾಟದಲ್ಲೂ ಆರ್ ಎಸ್ ಎಸ್ ಮಾತ್ರ ಕಾಣುತ್ತದೆ. ಅದನ್ನು ದೂಷಿಸುವುದು ಬಿಟ್ಟು ಇವರಿಗೆ ಬೇರೆ ಏನು ಕೆಲಸವೇ ಇಲ್ಲ ಎಂದು ಈಶ್ವರಪ್ಪ ಎಡಪಂಥೀಯರನ್ನು ಟೀಕಿಸಿದರು.
ಈಗ ನಡೆಯುತ್ತಿರುವ ಹೋರಾಟ ಯಾವುದೇ ಪಕ್ಷ ಅಥವಾ ಸಂಘಕ್ಕೆ ಸಂಬಂಧಪಟ್ಟಿರುವುದಿಲ್ಲ. ಇದರಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ನಾನು, ಹೆಚ್ ಎಂ ರೇವಣ್ಣ, ಬಂಡಪ್ಪ ಕಾಶೆಂಪೂರ, ವಿಶ್ವನಾಥ್ ಇತರರು ಇದ್ದೇವೆ ಎಂದು ದಾವಣಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ತಿಳಿಸಿದರು.