ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸಿಪಿಐಎಂ ನೇತೃತ್ವದ ಎಲ್ ಡಿ ಎಫ್ ಪ್ರಾಬಲ್ಯ ಮೆರೆದಿದೆ.
ಜಿಲ್ಲಾ ಪಂಚಾಯತ್, ಬ್ಲಾಕ್ ಪಂಚಾಯತ್ ಹಾಗೂ ನಗರಸಭೆಗಳಲ್ಲಿ ಎಲ್ ಡಿ ಎಫ್ ಮೇಲುಗೈ ಸಾಧಿಸಿದೆ.
ಗ್ರಾಮ ಪಂಚಾಯತ್ ಗಳಲ್ಲಿ ಯುಡಿಎಫ್ ಅಲ್ಪ ಮುನ್ನಡೆ ಸಾಧಿಸಿದೆ. ಕಾಸರಗೋಡು ಜಿಲ್ಲಾ ಪಂಚಾಯತ್ ಎಲ್ ಡಿಎಫ್ ಪಾಲಾಗಿದೆ. 17 ಸದಸ್ಯ ಬಲದಲ್ಲಿ ಎಲ್ ಡಿ ಎಫ್ 8, ಯು ಡಿ ಎಫ್ 7 ಮತ್ತು ಬಿಜೆಪಿ 2 ಸ್ಥಾನ ಪಡೆದುಕೊಂಡಿದೆ.
ಕಾಸರಗೋಡು ನಗರಸಭೆ ಮತ್ತು ಕಾಸರಗೋಡು ಬ್ಲಾಕ್ ಪಂಚಾಯತ್ ನಲ್ಲಿ ಯು ಡಿ ಎಫ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡಿದೆ.
ನೀಲೇಶ್ವರ ಮತ್ತು ಕಾಞಂಗಾಡ್ ನಗರ ಸಭೆಗಳಲ್ಲಿ ಎಲ್ ಎಲ್ ಡಿ ಎಫ್ ಮತ್ತೆ ಆಡಳಿತ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.
ಯು ಡಿ ಎಫ್ ವಶದಲ್ಲಿದ್ದ ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ ಈ ಬಾರಿ ಯಾರಿಗೂ ಬಹುಮತ ಲಭಿಸಿಲ್ಲ. ಯುಡಿಎಫ್ ಮತ್ತು ಬಿಜೆಪಿ ತಲಾ 6 ಸ್ಥಾನಗಳನ್ನು ಪಡೆದುಕೊಂಡಿದೆ.
ಕಾರಡ್ಕ, ಪರಪ್ಪ, ನೀಲೇಶ್ವರ ಮತ್ತು ಕಾಞಂಗಾಡ್ ಬ್ಲಾಕ್ ಪಂಚಾಯತ್ ಎಲ್ ಡಿ ಎಫ್ ಪಾಲಾಗಿದೆ. 38 ಗ್ರಾಮ ಪಂಚಾಯತ್ ಗಳ ಪೈಕಿ ಯು ಡಿ ಎಫ್ 16 , ಎಲ್ ಡಿ ಎಫ್ 15 ಅತೀ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. 6 ಗ್ರಾಮ ಪಂಚಾಯತ್ ಗಳಲ್ಲಿ ಎನ್ ಡಿಎ ಹೆಚ್ಚು ಸ್ಥಾನ ಗಳಿಸಿದೆ. ಆದರೆ ಸ್ಪಷ್ಟ ಬಹುಮತ ಇಲ್ಲದಿರುವುದು ಪಕ್ಷೇತರರ ಬೆಂಬಲ ಪಡೆಯಬೇಕಿದೆ.
ಒಂದು ಪಂಚಾಯತ್ ನಲ್ಲಿ ಪಕ್ಷೇತರರು ಹೆಚ್ಚು ಸ್ಥಾನ ಪಡೆದಿದ್ದಾರೆ.
ಕಳೆದ ಬಾರಿ ಎರಡು ಗ್ರಾಮ ಪಂಚಾಯತ್ ಗಳಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈ ಬಾರಿ ಆರು ಗ್ರಾಮ ಪಂಚಾಯತ್ ಗಳಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿದೆ. ಬೆಳ್ಳೂರು , ಮಧೂರು ನಲ್ಲಿ ಮತ್ತೆ ಸ್ಪಷ್ಟ ಬಹುಮತ ಪಡೆದುಕೊಂಡಿದೆ.
ಮೀಂಜ, ಪೈವಳಿಕೆ , ಬದಿಯಡ್ಕ, ಕುಂಬಳೆ ಗ್ರಾಮ ಪಂಚಾಯತ್ ನಲ್ಲಿ 8 ಸ್ಥಾನ ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಪಕ್ಷೇತರರ ಬೆಂಬಲ ಲಭಿಸಿದ್ದಲ್ಲಿ ಮಾತ್ರ ಅಧಿಕಾರಕ್ಕೇರಲು ಸಾಧ್ಯ.
ಪೈವಳಿಕೆ ಯಲ್ಲಿ ಎಲ್ ಡಿ ಎಫ್ ಮತ್ತು ಉಳಿದ ಮೂರು ಗ್ರಾಮ ಪಂಚಾಯತ್ ಗಳಲ್ಲಿ ಯು ಡಿ ಎಫ್ ಕೂಡಾ ತಲಾ 8 ಸ್ಥಾನಗಳನ್ನು ಪಡೆದಿದೆ. ಇದರಿಂದ ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ.
ಮಂಗಲ್ಪಾಡಿ, ಮೊಗ್ರಾಲ್ ಪುತ್ತೂರು, ಎಣ್ಮಕಜೆ, ಮಂಜೇಶ್ವರ, ಚೆಮ್ನಾಡ್, ಚೆಂಗಳ, ಬಲಾಳ್, ಈಸ್ಟ್ ಮತ್ತು ವೆಸ್ಟ್ ಎಳೇರಿ, ಪಡನ್ನ, ತ್ರಿಕ್ಕರಿಪುರ, ಪುಲ್ಲೂರು ಪೆರಿಯ,ಕಳ್ಳಾರ್ ಮೊದಲಾದೆಡೆಗ ಳಲ್ಲಿ ಯುಡಿಎಫ್ ಬಹುಮತ ಪಡೆದಿದೆ.
ಪಳ್ಳಿಕೆರೆ, ಅಜನೂರು, ಪನತ್ತಡಿ, ಕಿನಾನೂರು ಕರಿಂದಲ, ಕಯ್ಯೂರು ಚಿಮೇನಿ, ಪಿಲಿಕ್ಕೋಡ್ , ವಳಿಯಪರಂಬ , ಚೆರ್ವತ್ತೂರು , ಬೇಡಡ್ಕ ಮೊದಲಾದೆಡೆ ಎಲ್ ಡಿ ಎಫ್ ಬಹುಮ ತ ಪಡೆದುಕೊಂಡಿದ್ದು , ಉಳಿದ ಕಡೆಗಳಲ್ಲಿ ಸರಳ ಬಹುಮತ ಪಡೆದಿದೆ.