ಕಾರವಾರ: ರಾಜ್ಯದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ ಉದ್ಯಮಿ ಆರ್. ಎನ್ ಶಟ್ಟಿ (92) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
1928ರ ಆಗಸ್ಟ್ 15 ರಂದು ಭಟ್ಕಳ ತಾಲೂಕಿನ ಮುರುಡೇಶ್ವರದ ಕೃಷಿ ಕುಟುಂಬದಲ್ಲಿ ಜನಿಸಿದ ರಾಮ ನಾಗಪ್ಪ ಶೆಟ್ಟಿ ಮುರಡೇಶ್ವರ ದೇವಸ್ಥಾನದ ಅಧ್ಯಕ್ಷರಾಗಿದ್ದರು. ಇವರು 1967 ರಲ್ಲಿ ಆರ್. ಎನ್. ಶೆಟ್ಟಿ ಆಂಡ್ ಕಂಪನಿ ಪ್ರಾರಂಭಿಸಿದ್ದರು. ಕಟ್ಟಡ ನಿರ್ಮಾಣ, ಹೋಟಲ್ ಉದ್ಯಮ, ವೈದ್ಯಕೀಯ ರಂಗ, ಶಿಕ್ಷಣ ಕ್ಷೇತ್ರ ಸಮಾಜ ಸೇವೆಯ ಮೂಲಕ ಹೆಸರು ಗಳಿಸಿದ್ದರು. ಇವರ ಸೇವೆ ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯ 2009-10 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಮರುಡೇಶ್ವರದಲ್ಲಿ 123 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣ ಮಾಡುವ ಮೂಲಕ ಮುರುಡೇಶ್ವರ ಅಭಿವೃದ್ಧಿ ಹಾಗೂ ವಿಶ್ವ ಖ್ಯಾತಿಗೆ ಪಾತ್ರರಾದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಟ್ಟೀಟ್ ಮಾಡಿ ಸಂತಾಪ ಸೂಚಿಸಿದ್ದು ಅನೇಕ ಗಣ್ಯರು ಕಂಬನಿ ಮೀಡಿದಿದ್ದಾರೆ. ಮೃತರು ಮೂರು ಜನ ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.