ಮಡಿಕೇರಿ: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕುಶಾಲನಗರ ಸಮೀಪದ ಗೋಲ್ಡನ್ ಟೆಂಪಲ್ ಗೆ ಇನ್ನೂ ಹತ್ತು ದಿನ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ಅಲ್ಲಿನ ಆಡಳಿತ ಮಂಡಳಿ ತಿಳಿಸಿದೆ.
ಕೋವಿಡ್ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಮುಂದಿನ ಡಿ.26ರವರೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಪ್ರತಿದಿನ ನೂರಾರು ಪ್ರವಾಸಿಗರು ಸ್ಥಳಕ್ಕೆ ಬಂದು ನಿರಾಶೆಯಿಂದ ಮರಳುತ್ತಿದ್ದಾರೆ. ಟಿಬೆಟ್ ನಿರಾಶ್ರಿತರ ಶಿಬಿರದ ಆವರಣದಲ್ಲಿ ಗೋಲ್ಡನ್ ಟೆಂಪಲ್ ಇದ್ದು, ದೇಶ, ವಿದೇಶದ ಪ್ರವಾಸಿಗರ ಗಮನ ಸೆಳೆದಿದೆ.