ಚಾಮರಾಜನಗರ: ಅಕ್ರಮವಾಗಿ ನಾಡಬಂದೂಕನ್ನು ಹೊಂದಿದ್ದ ವ್ಯಕ್ತಿಯನ್ನು ಇಲ್ಲಿನ ಅರಣ್ಯ ಪೊಲೀಸ್ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಇಲ್ಲಿಗೆ ಸಮೀಪದ ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮದ ವರುಣ್ಕುಮಾರ್ (51) ಎಂದು ಗುರುತಿಸಲಾಗಿದ್ದು ಮತ್ತೊಬ್ಬ ಆರೋಪಿ ದೊಡ್ಡಿಂದುವಾಡಿ ಗ್ರಾಮದ ಬಸವಣ್ಣ ಪರಾರಿಯಾಗಿದ್ದಾನೆ.
ದೊಡ್ಡಿಂದುವಾಡಿ ಗ್ರಾಮದ ತೋಟದ ಮನೆಯಲ್ಲಿ ಕಾಡು ಪ್ರಾಣಿಗಳನ್ನು ಭೇಟಿಯಾಡಲು ಅಕ್ರಮವಾಗಿ ಬಂದೂಕನ್ನು ಬಳಸುತ್ತಿರುವುದಾಗಿ ಅರಣ್ಯ ಪೊಲೀಸ್ ಸಂಚಾರ ದಳಕ್ಕೆ ಮಾಹಿತಿ ಸಿಕ್ಕಿತ್ತು. ಬುಧವಾರ ಅಧಿಕಾರಿಗಳು ದಾಳಿ ನಡೆಸಿದಾಗ ಓರ್ವ ಆರೋಪಿ ಪರಾರಿಯಾಗಿದ್ದು, ಮತ್ತೊರ್ವ ಆರೋಪಿಯನ್ನು ಬಂಧಿಸಿ, ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಪಿಎಸ್ಐ ಮುದ್ದುಮಾದೇವ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.