ಬೆಳಗಾವಿ: ಕಾಂಗ್ರೆಸ್ ನ ಇಬ್ಬರು ಕಾರ್ಯಕರ್ತರ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ಆಗಿರುವ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ನಡೆದಿದೆ. ಅಪರಿಚಿತರು ಮುಸುಕುದಾರಿಸಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಕಾರ್ಯಕರ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ದುಷ್ಕರ್ಮಿಗಳು ಸುಮಾರು ಏಳು ಅಡಿ ದೂರದಿಂದ ಗುಂಡನ್ನು ಹಾರಿಸಿದ್ದು ಎನ್ನಲಾಗುತ್ತಿದ್ದು, ಕಿರಣ್ ರಜಪೂತ್ ಮತ್ತು ಬಾರಮಾ ಎನ್ನುವ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಇವರ ಗುರಿಯಾಗಿದ್ದರು ಎನ್ನಲಾಗಿದೆ. ಈ ಗುಂಡಿನ ದಾಳಿಯ ಮೂಲಕ ಗ್ರಾಮ ಪಂಚಾಯತಿ ಚುನಾವಣೆ ವಿವರ ಎಂದು ಊಹಿಸಿದ್ದು, ದುಷ್ಕರ್ಮಿಗಳುಗಾಗಿ ಹುಡುಕಾಟ ನಡೆಯುತ್ತಿದೆ ಎನ್ನಲಾಗುತ್ತಿದೆ. ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಡೆಯುತ್ತದೆ.