News Kannada
Monday, February 06 2023

ಕರ್ನಾಟಕ

ಬಂಡೀಪುರದ ಬೋಳುಗುಡ್ಡದಲ್ಲಿ ಹಸಿರು ಕ್ರಾಂತಿ

Photo Credit :

ಬಂಡೀಪುರದ ಬೋಳುಗುಡ್ಡದಲ್ಲಿ ಹಸಿರು ಕ್ರಾಂತಿ

ಚಾಮರಾಜನಗರ: ಬಂಡೀಪುರ ಅಭಯಾರಣ್ಯದಲ್ಲಿ ಸದಾ ಹಸಿರು ನೆಲೆಸುವಂತೆ ಮಾಡುವ ಮತ್ತು ಅಗ್ನಿ ಅನಾಹುತದಿಂದ ಬೋಳು ಪ್ರದೇಶಲ್ಲಿ ಹಸಿರು ಕ್ರಾಂತಿ ನಿಧಾನವಾಗಿ ಆರಂಭವಾಗಿದೆ.

ಅರಣ್ಯದಲ್ಲಿ ಹರಡಿ ಬೆಳೆಯುತ್ತಿರುವ ಲಂಟಾನಾ ಅರಣ್ಯಕ್ಕೆ ಮಾರಕವಾಗುತ್ತಿದೆ. ಇದನ್ನು ತೆಗೆದು ಒಂದೆಡೆ ಹುಲ್ಲು ಬೆಳೆಸುವ ಯತ್ನಗಳು ನಡೆದಿದ್ದರೆ ಮತ್ತೊಂದೆಡೆ ಸತ್ತಿರುವ ಮರಗಳ ಪೊಟರೆಗಳಲ್ಲಿ ಪರಾವಲಂಬಿ ಗಿಡಗಳನ್ನು ನೆಟ್ಟು ಅವುಗಳನ್ನು ಮರಗಳನ್ನಾಗಿ ಬೆಳೆಸುವ ಪ್ರಯತ್ನಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

ಸಾಮಾನ್ಯವಾಗಿ ದೊಡ್ಡ ಮರಗಳ ಪೊಟರೆಗಳಲ್ಲಿ ಗಿಡಗಳು ಹುಟ್ಟಿ ಬಳಿಕ ಅದೇ ಮರವನ್ನು ಆಶ್ರಯಿಸಿಕೊಂಡು ಹೆಮ್ಮರವಾಗಿ ಬೆಳೆಯುವುದು ಅರಣ್ಯಗಳಲ್ಲಿ ಕಂಡು ಬರುತ್ತವೆ. ಪಕ್ಷಿಗಳು ತಿಂದ ಹಣ್ಣುಗಳ ಬೀಜ ಅಥವಾ ಹಕ್ಕಿಗಳ ಹಿಕ್ಕೆಗಳಿಂದ ಬಿದ್ದ ಬೀಜಗಳು ಮರಗಳ ಪೊಟರೆಯಲ್ಲಿ ಉಳಿದು ಮಳೆ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬಳಿಕ ಮರವಾಗಿ ಬೆಳೆದು ನಿಲ್ಲುತ್ತವೆ. ಇದೊಂದು ನೈಸರ್ಗಿಕ ಕ್ರಿಯೆಯಾಗಿದೆ. ಆದರೆ ಬಂಡೀಪುರ ಅರಣ್ಯದಲ್ಲಿ ಈ ಹಿಂದೆ ಕಾಡ್ಗಿಚ್ಚು ಸಂಭವಿಸಿದ ವೇಳೆ ಬಹಳಷ್ಟು ಮರಗಳು ಬೆಂಕಿಗೆ ಸಿಲುಕಿ ಸತ್ತು ಹೋಗಿವೆ. ಆದರೆ ಕೆಲವು ಮರಗಳು ಸತ್ತಿದ್ದರೂ ಬೀಳದ ಹಾಗೆಯೇ ನಿಂತಿವೆ. ಇಂತಹ ಮರಗಳು ಹಾಗೂ ದುರ್ಬಲಗೊಂಡಿರುವ ಮರಗಳನ್ನು ಹುಡುಕಿ ಅವುಗಳ ಪೊಟರೆಯಲ್ಲಿ ಕೃತಕವಾಗಿ ಬೀಜಗಳನ್ನು ಬಿತ್ತಿ  ಗಿಡವಾಗಿ, ಮರವಾಗಿ ಬೆಳೆಸುವ ಪ್ರಯೋಗ ನಡೆಯುತ್ತಿದ್ದು ಇದರಲ್ಲಿ ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ಈ ಪ್ರಯೋಗದಿಂದ ಹಲವು ರೀತಿಯ ಉಪಯೋಗಗಳನ್ನು ನಿರೀಕ್ಷೆ ಮಾಡಲಾಗಿದೆ. ಪೊಟರೆಯಲ್ಲಿ ಬೆಳೆದು ಮರವಾಗುವ ಸಸ್ಯಗಳು ಹತ್ತಿ, ಆಲದಮರ, ಮತ್ತಿ, ಗೋಣಿ, ಬಸುರಿಯಾಗಿದ್ದು, ಇವು ಮರದ ಪೊಟರೆಯಲ್ಲಿರುವ ನೀರಿನ ಅಂಶ ಹಾಗೂ ಗೊಬ್ಬರವನ್ನು ಬಳಸಿಕೊಂಡು ಬೆಳೆಯುತ್ತಾ ಬೇರನ್ನು ಆಶ್ರಯ ಮರಗಳ ಮೂಲಕವೇ ಭೂಮಿಗೆ ತಲುಪಿಸಿ ಬಳಿಕ ಆಶ್ರಯ ಮರ ಸತ್ತರೂ ಈ ಮರಗಳು ಗಟ್ಟಿಯಾಗಿ ಭೂಮಿಯಲ್ಲಿ ಬೇರೂರಿ  ನಿಲ್ಲುತ್ತವೆ.

ಈ ಮರಗಳ ಹಣ್ಣು ಸೊಪ್ಪು ಎಲ್ಲವೂ ಸಸ್ಯಹಾರಿ ಪ್ರಾಣಿಗಳಿಗೆ ಆಹಾರವಾಗುವುದರಿಂದ ಕಾಡಿನಲ್ಲಿ ಮೇವಿನ ಕೊರತೆಯಾಗುವುದಿಲ್ಲ. ಜತೆಗೆ ಪರಿಸರ ಹಸಿರಾಗಲಿದೆ. ಸದ್ಯ ಅಧಿಕಾರಿಗಳು ಬಂಡೀಪುರ ವ್ಯಾಪ್ತಿಯ 13 ವಲಯಗಳಲ್ಲಿ ಕನಿಷ್ಠ 10 ಸಾವಿರ ಗಿಡಗಳನ್ನು ಬೆಳೆಸಿದ್ದು, ಒಂದು ವಲಯದಲ್ಲಿ ಗರಿಷ್ಠ ಎಂಟು ನೂರರಿಂದ ಸಾವಿರ  ಗಿಡಗಳನ್ನು ಬೆಳೆಸುವ ಯೋಜನೆಯನ್ನು ಇಲಾಖೆ ಹಮ್ಮಿಕೊಂಡಿದೆ. ಇದು ಯಶಸ್ವಿಯಾಗಿದ್ದೇ ಆದರೆ ಮುಂದಿನ ದಿನಗಳಲ್ಲಿ ಒಣಗಿದ ಮರಗಳು ಇರುವ ಖಾಲಿ ಪ್ರದೇಶ ಹಾಗೂ ಮರಗಿಡಗಳಿಲ್ಲದ ಜಾಗಗಳಲ್ಲಿ ಗಿಡಗಳನ್ನು ನಿರಂತರವಾಗಿ ನೆಡುವ ಕಾರ್ಯವನ್ನು ಹಮ್ಮಿಕೊಳ್ಳಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಅರಣ್ಯದಲ್ಲಿ ಎಷ್ಟು ಗಿಡಗಳು ನೆಡುವುದು ಮುಖ್ಯವಾಗುವುದಿಲ್ಲ. ಗಿಡಗಳು ಎಷ್ಟು ಬದುಕಿವೆ ಎಂಬುದು ಮುಖ್ಯವಾಗುತ್ತದೆ. ಕಾರಣ ಹಲವು ಕಾರಣಗಳಿಗೆ  ನೆಟ್ಟ ಗಿಡಗಳು ಬದುಕದ ಸಾಯಬಹುದು ಆದರೆ ನಿರಂತರವಾಗಿ ಗಿಡನೆಡುವ ಕಾರ್ಯಗಳು ನಡೆಯುತ್ತಿದ್ದರೆ ಮುಂದೊಂದು ದಿನ ಅರಣ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಿಡಗಳು ಬೆಳೆದು ಉಳಿಯಲು ಸಾಧ್ಯವಾಗಲಿದೆ.

See also  ಮದ್ಯ ಮಾರಾಟವನ್ನು ಜನರು ತಿರಸ್ಕರಿಸಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಕರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು