News Kannada
Tuesday, November 29 2022

ಕರ್ನಾಟಕ

ತಂಬೂರಿ ಕಲಾವಿದನ ವಿಶಿಷ್ಟ ಶೈಲಿಯ ಮತಯಾಚನೆ - 1 min read

Photo Credit :

ತಂಬೂರಿ ಕಲಾವಿದನ ವಿಶಿಷ್ಟ ಶೈಲಿಯ ಮತಯಾಚನೆ

ಚಾಮರಾಜನಗರ: ಜಿಲ್ಲೆಯಲ್ಲಿ ಜಾನಪದ ತಂಬೂರಿ ನುಡಿಸುವ ಕಲಾವಿದರೊಬ್ಬರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿನೂತನ ರೀತಿಯಲ್ಲಿ ಮತಯಾಚನೆ ಮಾಡುತಿದ್ದಾರೆ. ತಂಬೂರಿ ನುಡಿಸುವ ಮೂಲಕ ಮತದಾರರ ಮನೆ‌ಬಾಗಿಲಿಗೆ ತೆರಳಿ ಮತ ಯಾಚನೆ ಮಾಡಿ ಗಮನ ಸೆಳೆದಿದ್ದಾರೆ.

ಚಾಮರಾಜನಗರದ ಸಮೀಪದ ದೊಡ್ಡಮೋಳೆ ಗ್ರಾಮದ 62 ವರ್ಷದ ಸಿದ್ದಶೆಟ್ಟಿ ಅವರಿಗೆ ಗ್ರಾಮ ಪಂಚಾಯ್ತಿ ಚುನಾವಣೆ ಹೊಸದೇನಲ್ಲ. ಇವರು ಕಳೆದ ಇಪ್ಪತ್ತು ವರ್ಷಗಳಿಂದಲೂ ಚುನಾವಣೆಯಲ್ಲಿ ಸ್ಪರ್ದಿಸುತ್ತಾ ಬಂದಿದ್ದಾರೆ. ಆದರೆ ಗೆಲವಂತೂ ಸಿಕಿಲ್ಲ. ಗೆಲ್ಲುವ ತನಕ ನಾನು ಸ್ಪರ್ಧಿಸಿಯೆ ತೀರುತ್ತೇನೆ ಎಂದು ಛಲ ಬಿಡದೆ ಕಲಾವಿದ ಹತ್ತಾರು ವರ್ಷಗಳಿಂದ ಮತ ಕೇಳುತ್ತಲೆ ಇದ್ದಾರೆ.

ಈ ಜಾನಪದ ಕಲಾದವಿದನಿಗೆ ಇದು ಐದನೇ ಚುನಾವಣೆಯಾಗಿದೆ. ದೊಡ್ಡ ಮೋಳೆ ಗ್ರಾಮದ ಮೊದಲನೆಯ ಬ್ಲಾಕಿನಿಂದ ಚುನಾವಣೆಗೆ ಸ್ಪರ್ಧಿಸಿರುವ ಸಿದ್ದಶೆಟ್ಟಿ, ಈ ಬಾರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರಾಮಾಭಿವೃದ್ಧಿಯ ಕನಸು ಹೊತ್ತಿರುವ ನನಗೆ ಮತವನ್ನು ಹಾಕುವ ಮೂಲಕ ನನ್ನ ಕನಸನ್ನು ನನಸನ್ನಾಗಿಸಿ ಎಂದು ತಾವು ಸ್ಪರ್ಧಿಸಿರುವ ಬ್ಲಾಕಿನಲ್ಲಿ ತಂಬೂರಿಯನ್ನು ನುಡಿಸುತ್ತಾ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ನನಗೆ ಭಿಕ್ಷೆ ಬೇಡ, ಹಣ ಬೇಡ, ನನ್ನ ಸಿತಾರ್ ಗುರುತಿಗೆ ನಿಮ್ಮ ಮತ ಭಿಕ್ಷೆ ನೀಡಿ ಎಂದು ಬೇಡುವ ಮೂಲಕ ಗಮನ ಸೆಳೆದಿದ್ದಾರೆ.

See also  ಪೋಲೀಸ್‌ ಇಲಾಖೆಯಲ್ಲಿ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆ ಸೃಷ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು