ಮಂಡ್ಯ: ರಾಜ್ಯ ಸರ್ಕಾರದಿಂದ ಶುಚಿ ಯೋಜನೆ ಸ್ಥಗಿತಗೊಳಿಸಿರುವುದು ಖಂಡನೀಯ, ತತ್ ಕ್ಷಣವೇ ಯೋಜನೆಯನ್ನು ಜಾರಿಮಾಡುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಅಂಜನಾಶ್ರೀಕಾಂತ್ ಅವರು, ಗ್ರಾಮೀಣ ಭಾಗಗಳಲ್ಲಿ ಹದಿಹರಯದ ಹೆಣ್ಣುಮಕ್ಕಳ ಪರಿಸ್ಥತಿ ಶೋಚನೀಯವಾಗಿದೆ. ಋತುಚಕ್ರದ ಸಮಯದಲ್ಲಿ ಈಗಲೂ ಹಳೇ ಬಟ್ಟೆಗಳನ್ನೇ ಗ್ರಾಮೀಣಭಾಗದ ಮಹಿಳೆಯರು ಬಳಸುತ್ತಿದ್ದಾರೆ, ಇದರಿಂದ ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಉಂಟಾಗುತ್ತಿದೆ ಎಂದು ದೂರಿಸಿದರು.
ಕೋವಿಡ್-19ರ ನೆಪವೊಡ್ಡಿ ಸರ್ಕಾರಿ ಶಾಲೆಯ ಶುಚಿಯೋಜನೆ ಸ್ಥಗಿತ ಮಾಡಿದೆ, ಆದ್ರೆ ಋತುಚಕ್ರ ಯಾವ ಕೋವಿಡ್-19ಗೂ ನಿಲ್ಲುವುದಿಲ್ಲ, ಸರ್ಕಾರ ಉಚಿತವಾಗಿ ಹೆಣ್ಣುಮಕ್ಕಳಿಗೆ ಪ್ಯಾಡ್ಗಳನ್ನು ನೀಡಬೇಕು, ಕೂಡಲೇ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಆರೋಗ್ಯದ ದೃಷ್ಠಿಯನ್ನು ಗಣನೆಗೆ ತೆಗೆದುಕೊಂಡು ಶುಚಿ ಯೋಜನೆಯನ್ನು ಜಾರಿ ಮಾಡಬೇಕು, ಇಲ್ಲದಿದ್ದರೆ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಪ್ರತಿಭಟನೆ ಮೂಲಕ ಜಾಗೃತಿ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರದಲ್ಲಿ ಸೋನಿಯಾಗಾಂಧಿ ಬ್ರಿಗೇಡ್ ಅಧ್ಯಕ್ಷೆ ವೀಣಾಶಂಕರ್, ಪ್ರಿಯದರ್ಶಿನಿ ಮಹಿಳಾ ಕಾಂಗ್ರಸ್ ಆಧ್ಯಕ್ಷೆ ರಶ್ಮಿಶಿವಕುಮಾರ್, ನಗರಸಭಾ ಮಾಜಿ ಸದಸ್ಯೆ ಪದ್ಮಮೋಹನ್, ಯಶೋಧಾ, ಜಯಲಕ್ಷ್ಮಿ, ನಂದಿನಿ, ವಿಜಯಲಕ್ಷ್ಮಿ, ಮಮತಾ ಮತ್ತಿತರರಿದ್ದರು.