ತುಮಕೂರು: ತುಮಕೂರಿನಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಮಿತಿಮೀರಿ ಹೋಗಿದೆ. ನಡುರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬ್ಯಾಗ್ ನ್ನು ಕಳ್ಳನೊಬ್ಬ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ವಿಚಿತ್ರ ಎಂದರೆ ಖದೀಮರ ವಿರುದ್ದ ಕೇಸ್ ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೆ ಮುಂದೆ ನೋಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಂಡೀಪೇಟೆ ಮುಖ್ಯರಸ್ತೆಯಲ್ಲಿ ಸೇಲ್ಸ್ ಬಾಯ್ ಬ್ಯಾಗ್ ಕಿತ್ತುಕೊಂಡು ಕಳ್ಳ ಪರಾರಿ ಆಗಿದ್ದಾನೆ. ಬ್ಯಾಗ್ ನಲ್ಲಿ ಸುಮಾರು ಒಂದೂವರೆ ಲಕ್ಷ ಹಣವಿತ್ತು ಎಂದು ಹಣವನ್ನು ಕಳೆದುಕೊಂಡಿರುವ ಮಂಡಿಪೇಟೆ ವರ್ತಕ ಹರೀಶ್ ತಿಳಿಸಿದ್ದಾರೆ.