News Kannada
Friday, February 03 2023

ಕರ್ನಾಟಕ

ಆನೆ ದಾಳಿಗೆ ಅರಣ್ಯ ಇಲಾಖೆ ನೌಕರ ಬಲಿ

Photo Credit :

ಆನೆ ದಾಳಿಗೆ ಅರಣ್ಯ ಇಲಾಖೆ ನೌಕರ ಬಲಿ

ಹುಣಸೂರು:  ಆನೆ ದಾಳಿ ಮಾಡಿದ ಪರಿಣಾಮ  ಅರಣ್ಯ ಇಲಾಖೆ ನೌಕರ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ದೊಡ್ಡಳ್ಳದ ಸಮೀಪ ನಡೆದಿದೆ.

ನಾಗರಹೊಳೆ  ಕ್ಷೇಮಾಭಿವೃದ್ಧಿ  ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ  ಗುರುರಾಜು(50)   ಆನೆ ದಾಳಿಗೆ ಮೃತ ಪಟ್ಟ ದುರ್ದೈವಿ.  ಇವರು ಮೂಲತಃ  ಕಲ್ಕುಣಿಕೆ  ಗ್ರಾಮದರಾಗಿದ್ದಾರೆ.  ಆನೆಗೆ ಮದವೇರಿದ ಕಾರಣ  ಗುರುರಾಜು ಅವರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಏಕಾಏಕಿ ನಡೆಸಿದ ದಾಳಿಯಿಂದ ಗಂಭೀರ ಗಾಯಗೊಂಡ ಗುರುರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ನೀಡಲಿದ್ದು,  ಶುಕ್ರವಾರ ಅವರ ಸ್ವಂತ ಊರು ಕಲ್ಕುಣಿಕೆ ಗ್ರಾಮದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ವರ್ಗ ತಿಳಿಸಿದೆ.

ಸುಮಾರು 23 ವರ್ಷಗಳಿಂದ ನಾಗರಹೊಳೆಯಲ್ಲಿ ಅಡುಗೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುರುರಾಜು ಕುಟುಂಬಕ್ಕೆ  ಆಸರೆಯಾಗಿದ್ದರು. ಅವರ ಸಾವಿನಿಂದ ಅವರ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಿದ್ದು. ಸ್ನೇಹ ಜೀವಿಯಾಗಿದ್ದ ಗುರುರಾಜು ನಿಧನಕ್ಕೆ ಅವರ ಸಹೋದ್ಯೋಗಿಗಳು  ಕಂಬನಿ ಮಿಡಿದಿದ್ದಾರೆ. ಕೂಡಲೇ ಸರಕಾರ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. 

See also  ಸಮುದ್ರದಲ್ಲಿ ಕೊಚ್ಚಿ ಹೋದ ಮೂವರು ಯುವಕರ ರಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು