ವಿಜಯಪುರ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗೆ ಕಳುಹಿಸಿ ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಮಾನವೀಯತೆ ಮೆರೆದಿದ ಘಟನೆ ವಿಜಯಪುರ ಜಿಲ್ಲೆಯ ಶಿವಣಗಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 218ರಲ್ಲಿ ನಡೆದಿದೆ.
ಓಮಿನಿ ವಾಹನಕ್ಕೆ ಹಾಗೂ ಸರ್ಕಾರಿ ಬಸ್ ಡಿಕ್ಕಿ ಆಗಿ, 5 ಜನರು ಗಾಯಗೊಂಡಿದ್ದರು. ಈ ವೇಳೆ ಕಲಬುರಗಿಯಿಂದ ವಿಜಯಪುರ ಕಡೆಗೆ ಬರುತ್ತಿದ್ದ ಉಮೇಶ್ ಜಾಧವ್ ಕಾರಿನಿಂದ ಕೆಳಗಿಳಿದು ಬಂದು ಗಾಯಾಳುಗಳಿಗೆ ಸಹಾಯ ಮಾಡಿದ್ದಾರೆ. ನಂತರ 108 ಆಯಂಬುಲೆನ್ಸ್ಗೆ ಕರೆ ಮಾಡಿ, ವಿಜಯಪುರದ ಜಿಲ್ಲಾಸ್ಪತ್ರೆಗೆ ಕಳಿಸುವ ವ್ಯವಸ್ಥೆಯನ್ನು ಮಾಡಿ ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.
ಈ ಎಲ್ಲ ಘಟನೆಗಳ ನಂತರ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದರಿಂದ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಅವರಿಗೆ ಮಾಹಿತಿ ನೀಡಿದ್ದಾರೆ.