ಶಿವಮೊಗ್ಗ: ಸಿಗಂದೂರು ದೇವಸ್ಶಾನದ ವಿಚಾರದಲ್ಲಿ ಶಾಪ ಆಗುತ್ತೆ ಎಂದಿದ್ದೆ ಸಿಎಂಗೆ ಈಗ ಶಾಪ ತಗುಲಿದೆ. ಡಿನೋಟಿಫೈ ವಿಚಾರದಲ್ಲಿ ಶಾಪ ತಗುಲಿದೆ. ನಾನು ರಾಜೀನಾಮೆ ಕೇಳಲ್ಲ. ಮುಂದಿನ 15 ದಿನಗಳಲ್ಲಿ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಗೋಪಾಲ ಕೃಷ್ಣ ಬೇಳೂರು ಭವಿಷ್ಯ ನುಡಿದರು.
ಸುದ್ದಿಗೋಪಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಬಿಎಸ್ ವೈ ಹೊಸ ಪಕ್ಷ ರಚನೆಗೆ ಕೈಹಾಕಿರುವ ಅನುಮಾನವಿದೆ. ಈ ಹಿನ್ನಲೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿದು ಹೊಸಪಕ್ಷ ರಚನೆಯಲ್ಲಿ ತೊಡಗಿಕೊಳ್ಳುವ ಅನುಮಾನವಿದೆ ಹಾಗಾಗಿ ಅವರು ಸಂಕ್ರಾಂತಿಯ ನಂತರ ಸಿಎಂ ಆಗಿ ಮುಂದುವರೆಯೋಲ್ಲವೆಂದು ಗಂಭೀರ ಆರೋಪ ಮಾಡಿದರು.
ಬಿಜೆಪಿ ಭ್ರಷ್ಠಾಚಾರದ ಹಣದಿಂದ ಗ್ರಾಪಂ ಚುನಾವಣೆ ನಡೆಸಿದೆ. ಒಬ್ಬ ಅಭ್ಯರ್ಥಿಗೆ 15-25 ಸಾವಿರ ಹಣ ನೀಡಲಾಗಿದೆ. ಆದರೂ ಬಿಜೆಪಿ ಅಭ್ಯರ್ಥಿ ಗೆಲ್ಕುವುದಿಲ್ಲವೆಂದು ಗುಟರ್ ಹಾಕಿದರು.
94 ಸಿಸಿ, ಹೊಸ ಮನೆ ನಿರ್ಮಾಣ ಮಾಡದೆ ಬಿಜೆಪಿ ಯಾವ ಅಭಿವೃದ್ಧಿ ನಡೆಸಲಿಲ್ಲ. ಭ್ರಷ್ಠಾಚಾರಕ್ಕೆ ಮುಂದಾಗಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಬಹಳ ಕಹಿ ಅನುಭವಿಸಲಿದೆ.
ಹೊಸ ವರ್ಷ ಆಚರಣೆಗೆ ಬಿಜೆಪಿ ಸರ್ಕಾರ ನಿರ್ಬಂಧ ಹೇರಿರುವ ಹಿಂದೆ ಆರ್ ಎಸ್ ಸ್ ನ ಪಿತೂರಿ ಇದೆ. ಪಿತೂರಿಗೆ ಕಾರಣ ಆರ್ ಎಸ್ ಎಸ್ ಗೆ ಕ್ರಿಶ್ಚನ್ ಸಮುದಾಯದ ಆಚರಣೆ ಬಗ್ಗೆ ವಿಶ್ಚಾಸವಿಲ್ಲವೆಂದು ಗಂಭೀರ ಆರೋಪಿಸಿದರ.