News Kannada
Tuesday, February 07 2023

ಕರ್ನಾಟಕ

ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ

Photo Credit :

ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಚಿಕ್ಕಮಗಳೂರು: ಉಪ ಸಭಾಪತಿ‌ ಎಸ್.ಎಲ್.ಧರ್ಮೇಗೌಡ ಅವರ ಮೃತದೇಹವು  ಕುಡೂರು ತಾಲೂಕಿನ ಗುಣಸಾಗರದಲ್ಲಿ ರೈಲ್ವೆ ಹಳಿಯಲ್ಲಿ ಮಂಗಳವಾರ ನಸುಕಿನ ಜಾವ ಪತ್ತೆಯಾಗಿದೆ.

ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರು ನಿನ್ನೆ ರಾತ್ರಿ ತೋಟದ ಮನೆಯಿಂದ ಒಬ್ಬರೇ ಹೊರಟವರು ರಾತ್ರಿ ಬಹಳ ಹೊತ್ತಾದರೂ ಮರಳಲಿಲ್ಲ. ಫೋನ್ ರಿಂಗ್ ಆಗುತ್ತಿದ್ದರೂ ರಿಸೀವ್ ಆಗುತ್ತಿರಲಿಲ್ಲ. ಅನುಮಾನಗೊಂಡು ಹುಡುಕಿದಾಗ ಅವರು ರೈಲಿಗೆ ಸಿಕ್ಕು ಮೃತಪಟ್ಟಿರುವುದು ಗೊತ್ತಾಗಿದೆ.

ರೈಲಿನ ರಭಸಕ್ಕೆ ದೇಹ ಎರಡು ತುಂಡಾಗಿ ಎರಡು ದಿಕ್ಕಿಗೆ ಬಿದ್ದಿತ್ತು. ತಲೆ ಗುರುತು ಹಿಡಿದು ಮೃತದೇಹ ಧರ್ಮೇಗೌಡರದ್ದೇ ಎಂದು ಖಚಿತಪಡಿಸಿಕೊಂಡ ಗನ್ ಮನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯದ ಮಟ್ಟಿಗೆ ಇದೊಂದು ಆತ್ಮಹತ್ಯೆ ಎನ್ನಲಾಗುತ್ತಿದೆ. ಆದರೆ ಇತರೆ ಸಾಧ್ಯತೆಗಳನ್ನು ತಳ್ಳಿ ಹಾಕದ ಪೊಲೀಸರು ಎಲ್ಲಾ ದಿಕ್ಕಿನಿಂದಲೂ ತನಿಖೆ ನಡೆಸುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ,ಸಿ.ಟಿ. ರವಿ ಸೇರಿದಂತೆ ಜಿಲ್ಲೆಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿಗೆ ತೆರಳಲಿದ್ದಾರೆ.

16 ಡಿಸೆಂಬರ್ 1955 ರಂದು ಜನಿಸಿದ್ದ ಧರ್ಮೇಗೌಡರಿಗೆ 65 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಎಸ್.ಎಲ್.ಬೋಜೇಗೌಡ ಮತ್ತು ಎಸ್.ಎಲ್.ಧರ್ಮೇಗೌಡ ಸಹೋದರಾಗಿದ್ದು, ದೇವೇಗೌಡರ ಕುಟುಂಬಕ್ಕೆ ಆಪ್ತರಾಗಿದ್ದರು.

ಜೆ ಡಿ ಎಸ್ ಜತೆಗೇ ರಾಜಕೀಯ ಜೀವನ ಆರಂಭಿಸಿದ್ದರು. ಯಾವತ್ತೂ ಪಕ್ಷ ನಿಷ್ಠೆ ಬದಲಿಸಿರಲಿಲ್ಲ.

See also  ಮಂಡ್ಯದಲ್ಲಿ ರೈತ ಸಂಘಟನೆ ಮುಖಂಡರ ನಡುವೆ ವಾಗ್ವಾದ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು