ಮಂಡ್ಯ: ಕೋವಿಡ್ನಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ನರ್ಸ್ಗಳಿಗೆ ಸಹಾಯವಾಗುವ ರೋಬೋಟ್ನ್ನು ಪಿಇಎಸ್ ತಾಂತ್ರಿಕ ಕಾಲೇಜಿನ ಎಎನ್ಸಿ ವಿಭಾಗದ ವಿದ್ಯಾರ್ಥಿ ಮಣಿಕಂಠ ಸವದತ್ತಿ ಆವಿಷ್ಕಾರ ಮಾಡಿದ್ದಾರೆ.
ಈ ಬಗ್ಗೆ ಕಾಲೇಜಿನ ವಿದ್ಯುನ್ಮಾನ ಸಂಹವನ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣರಾವ್ ಅವರು ಕಾಲೇಜಿನ ಎಂಬಿಎ ಬ್ಲಾಕ್ನಲ್ಲಿ ನಡೆದ ರೋಬೋಟ್ಗಳ ಪ್ರಾತ್ಯಾಕ್ಷಿತೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಸಾಯನಿಕ ವಸ್ತುಗಳಿರುವ ಪ್ರದೇಶ, ಮನುಷ್ಯರು ಹೋಗದಂತಹ ಸ್ಥಗಳಿಗೆ ಸುಲಭವಾಗಿ ರೋಬೋಟ್ಗಳ ಸಹಾಯದಿಂದ ಕೆಲಸ ಮಾಡಿಸುವಂತಾಗಲು ಎರಡು ರೋಬೋಟ್ಗಳನ್ನು ನಮ್ಮ ವಿದ್ಯಾರ್ಥಿ ಆವಿಷ್ಕಾರ ಮಾಡಿದ್ದಾರೆ. ಇದು ಕೆಲವು ಕಡೆಗಳಲ್ಲಿ ಬಳಸಬಹುದಾಗಿದೆ ಎಂದು ಹೇಳಿದರು.
ರೋಬೋಟ್ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಈಗಾಗಲೇ ಅವರು ನಾಲ್ಕೈದು ರೋಬೋಟ್ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಂತರಾಷ್ಟ್ರೀಯ ಸಂಸ್ಥೆಯ ಸಹಯೋಗದಲ್ಲಿ ಸಾಕಷ್ಟು ಮಾದರಿಗಳನು ಮಾಡಿದ್ದಾರೆ. ಇನ್ನೂ ಹಲವಾರು ಯೋಜನೆಗಳನ್ನು ರೂಪಿಸಲು ಸಿದ್ಧತೆಯನ್ನೂ ಮಾಡಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ಇಂತಹ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದರು.
ಬಿ.ಇ. ಪದವಿ ಪೂರ್ಣಗೊಳಿಸುವ ಮುನ್ನ ಜನರಿಗೆ ಉಪಯೋಗವಾಗುವಂತಹ, ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ತಯಾರಿಸುವಂತೆ ಸಲಹೆ ನೀಡಿದ್ದು, ಈ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖರಾಗುವುದಾಗಿ ಭರವಸೆ ನೀಡಿದ್ದಾರೆ. ಈ ವಿದ್ಯಾರ್ಥಿಗೆ ಹೆಚ್ಚಿನ ಪೆÇ್ರೀ ತ್ಸಾಹ ನೀಡುವುದಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ವಿ. ರವೀಂದ್ರ, ಪ್ರಾಧ್ಯಾಪಕರುಗಳಾದ ಡಾ. ಎಂ.ಎಸ್. ವೀಣಾ, ಡಾ. ಷಣ್ಮುಖ, ಡಾ. ಪೂಜಾ ನಾಗಪಾಲ್, ಡಾ. ಮಹೇಂದ್ರಬಾಬು, ಕಾಲೇಜಿನ ಡೀನ್ ಡಾ. ಬಿ.ಎಸ್. ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.