ಮಡಿಕೇರಿ: ಬ್ರಿಟನ್ನಿಂದ ಕೊಡಗಿಗೆ ಆಗಮಿಸಿದ್ದ ಐವರು ನಾಪತ್ತೆ ಆಗಿರುವುದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ಒಟ್ಟು 20 ಮಂದಿ ಆಗಮಿಸಿದ್ದು ಅವರಲ್ಲಿ 15 ಮಂದಿಯು ಕೋವಿಡ್ 19 ಪರೀಕ್ಷೆ ಮಅಡಿಸಿಕೊಂಡಿದ್ದು ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಆದರೆ ಐವರು ಇನ್ನೂ ಪತ್ತೆ ಆಗಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ನಾಪತ್ತೆ ಆಗಿರುವವರಿಗೆ ಪೊಲೀಸರು ಶೋಧ ಕಾರ್ಯ ನಡೆಸುತಿದ್ದಾರೆ. ಐವರು ನಾಪತ್ತೆ ಆಗಿರುವುದರಿಂದ ಇವರಿಗೆ ಕೋವಿಡ್ ಇದ್ದ ಪಕ್ಷದಲ್ಲಿ ಇವರ ಮೂಲಕ ರೂಪಾಂತರ ಕೊರೋನ ವೈರಸ್ ಇತರರಿಗೆ ಹರಡುವ ಸಂಭವವಿದ್ದು ಜನರು ಆತಂಕಿತರಾಗಿದ್ದಾರೆ.