ಶಿವಮೊಗ್ಗ: ಬ್ರಿಟನ್ ನಿಂದ ವಾಪಾಸಾದ ಶಿವಮೊಗ್ಗದ ನಾಲ್ವರಲ್ಲಿ ರೂಪಾಂತರ ಕೊರೋನ ಇರುವುದು ದೃಢಪಟ್ಟಿದ್ದು, ಇದರಿಂದ ಶಿವಮೊಗ್ಗ ನಗರದಲ್ಲಿ ಹೆಚ್ಚು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.
ಡಿ. 22 ರಂದು ಬ್ರಿಟನ್ ನಿಂದ ವಾಪಾಸಾದ ಒಂದೇ ಕುಟುಂಬದ ನಾಲ್ವರಲ್ಲಿ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಇವರ ಸ್ಯಾಂಪಲ್ಸ್ ಗಳನ್ನ ಮೊದಲಿಗೆ ಬೆಂಗಳೂರಿನ ನಿಮಾನ್ಸ್ ಗೆ ರವಾನಿಸಿ ನಂತರ ಪೂನಾದ ವೈರಾಣು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು.
ಆದರೆ ಇಂದು ಐಸಿಎಂಆರ್ 5 ಮಂದಿಗೆ ರೂಪಾಂತರ ಕೊರೋನ ಇರುವ ಕುರಿತು ಶಂಕೆ ವ್ಯಕ್ತವಾಗಿತ್ತು. ಅದರಲ್ಲಿ ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಲ್ಲಿ ಈ ರೂಪಾಂತರ ಕೊರೋನ ದೃಢಪಡಿಸಲಾಗಿದೆ. ಮೂವರು ಪ್ರಾಥಮಿಕ ಸಂಪಕರ್ವನ್ನ ಸಚಿವ ಡಾ.ಸುಧಾಕರ್ ಬೆಂಗಳೂರಿನಲ್ಲಿ ಧೃಡಪಡಿಸಿದ್ದಾರೆ.
ನಾಲ್ವರೂ ಶಿವಮೊಗ್ಗಕ್ಕೆ ಬಂದ ತತಕ್ಷಣ ಅವನ್ನು ಕ್ವಾರಂಟೈನ್/ಐಸೋಲೇಶನ್’ನಲ್ಲಿ ಇರಿಸಲಾಗಿದೆ. ಹೀಗಾಗಿ ಇದು ದೊಡ್ಡ ಮಟ್ಟದಲ್ಲಿ ಹರಡಿಲ್ಲ. ಆದರೂ, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಲ್ಲಿ ಮಾತ್ರ ಸೋಂಕು ತಗುಲಿದೆ ಎನ್ನಲಾಗುತ್ತಿದೆ.
ಕೊರೋನ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದರೂ, ಈ ರೂಪಾಂತರ ಕೊರೋನ ದೇಶದಲ್ಲಿ ಇರುವುದರ ಬಗ್ಗೆ ಸಾಬೀತಾಗಿರುವುದು ಭಯಹುಟ್ಟಿಸಿದೆ. ಇವರಿಗೆ ಬ್ರಿಟನ್ ಮತ್ತು ಬೆಂಗಳೂರಿನಲ್ಲಿ ಚೆಕ್ ಮಾಡಿಸದೆ ಹಾಗೆ ಕಳುಹಿಸಿರುವುದರ ಬಗ್ಗೆ ಮಾಹಿತಿ ದೊರೆತಿದ್ದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.