ಮಂಡ್ಯ: ನಗರದ ಸರ್ಕಾರಿ ಸಾರಿಗೆ ಬಸ್ಸ್ ನಿಲ್ದಾಣದಲ್ಲಿ ಸೆಂಟಿನಿಯಲ್ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಮಹಿಳಾ ಶೌಚಾಯದಲ್ಲಿ ಮಹಿಳೆಯರ ಆರೋಗ್ಯ ಮತ್ತು ಸ್ವಚ್ಛತೆಗಾಗಿ ಸ್ಯಾನಿಟರಿ ನ್ಯಾಪ್ಕಿನ್ ಮಷಿನ್ ಅಳವಡಿಕೆ ಕಾರ್ಯಕ್ರಮಕ್ಕೆ ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಡಾ. ರಮೇಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಠಿಯಿಂದ ಬಡಮಹಿಳೆಯರಿಗಾಗಿ ಸ್ಯಾನಿಟರಿ ನ್ಯಾಪ್ಕಿನ್ ವಿತರಣಾ ಯಂತ್ರವನ್ನು ಅಳವಡಿಸಲಾಗಿದೆ, 5 ರೂ. ಕಾಯಿನ್ ಹಾಕಿ ಪ್ಯಾಡ್ಗಳನ್ನು ಪಡೆದು ಆರೋಗ್ಯಕ್ಕಾಗಿ ಉಪಯೋಗಿಸಬಹುದು, ಯಂತ್ರವನ್ನು ಉತ್ತಮವಾಗಿ ಬಳಕೆ ಮಾಡಿಕೊಂಡರೆ ಎಲ್ಲರಿಗೂ ಉಪಯೋಗವಾಗಿತ್ತದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಗೆ ರಾಜ್ಯಪಾಲನಾಗಿ ಆಯ್ಕೆಯಾದ ತಕ್ಷಣವೇ ಕೊವಿಡ್-19ರ ಸಂಕಷ್ಟಕದ ದಿನಗಳು ಎದುರಾದವು, ಲಯನ್ಸ್ ಸಂಸ್ಥೆಗಳ ಸೇವಾ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ ಎನ್ನುವ ವೇಳೆಗೆ ನಾವು ಕೋವಿಡ್-19ರ ನಿಯಂತ್ರಣಕ್ಕಾಗಿ ಲಯನ್ಸ್ ಸಂಸ್ಥೆಯಿಂದ ಜಿಲ್ಲಾದ್ಯಂತ ನಾನಾ ಆರೋಗ್ಯ ಚಟುವಟಿಕೆಗಳ ಕಾರ್ಯಗಳು ನಡೆದು, ಸುಮಾರು ಕೋಟಿ ರೂ.ಗಳ ಸೇವಾ ಸಾಮಗ್ರಿಗಳು ಜನರಿಗೆ, ಆಸ್ಪತ್ರೆಗಳಿಗೆ, ಕೊರೋನಾ ವಾರಿಯರ್ಸ್ಗಳಿಗೆ ತಲುಪಿಸಿ, ಅಳಿಲು ಸೇವೆ ಮಾಡಿದ್ದೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಪ್ರಥಮ ಮಹಿಳೆ ಪ್ರತೀಮಾರಮೇಶ್, ಸೆಂಟಿನಿಯಲ್ ಲಯನ್ಸ್ ಸಂಸ್ಥೆ ಅಧ್ಯಕ್ಷೆ ನಿರ್ಮಲಾ, ಕಾರ್ಯದರ್ಶಿ ಮೀನಾ, ಪ್ರಾಂತೀಯ ಅಧ್ಯಕ್ಷ ಚಂದ್ರಶೇಖರ್, ನಿತ್ಯಾನಂದ, ರಾಧಾ ಮತ್ತಿತರರಿದ್ದರು.