ಕಾಸರಗೋಡು: ವಿದೇಶದಿಂದ ಜಿಲ್ಲೆಗೆ ಆಗಮಿಸಿದವರು ಒಂದು ವಾರ ರೂಂ ಕ್ವಾರಂಟೈನ್ ಗೆ ತೆರಳುವಂತೆ ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ತಿಳಿಸಿದ್ದಾರೆ.
ಇಂಗ್ಲೆಂಡ್, ಇಟಲಿ ಹಾಗೂ ಇತರ ಗಲ್ಫ್ ರಾಜ್ಯ ಗಳಿಂದ ಆಗಮಿಸಿದವರು 7 ದಿನ ಕ್ವಾರಂಟೈನ್ ಗೆ ಪ್ರವೇಶಿಸಬೇಕು. 8 ನೇ ದಿನ ಆರ್ ಟಿ ಪಿ .ಸಿ ಆರ್ ಟೆಸ್ಟ್ ಗೆ ಒಳಪಡಬೇಕು. ರೋಗ ಲಕ್ಷಣ ಹೊಂದಿದವರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ಅವರು ಶುಕ್ರವಾರ ನಡೆದ ಕೊರೋನಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚಿಸಲು ತೀರ್ಮಾನಿಸಲಾಯಿತು. ಗ್ರಾಮ ಪಂಚಾಯತ್, ನಗರಸಭಾ ವಾಪ್ತಿಯಲ್ಲಿ ತಲಾ 100 ಮಂದಿಗೆ ತಪಾಸಣೆ ನಡೆಸಬೇಕು. ಮೂರು ವಾರಗಳ ಕಾಲ ನಿರಂತರ ತಪಾಸಣೆ ನಡೆಯಲಿದೆ. 18 ದಿನಗಳ ಕಾಲ ಅತೀ ಹೆಚ್ಚು ತಪಾಸಣೆ ನಡೆಸಿದ ಗ್ರಾಮ ಪಂಚಾಯತ್ ಮತ್ತು ನಗರಸಭೆಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಮೊದಲ ಸ್ಥಾನ ಪಡೆದ ಪಂಚಾಯತ್ ಮತ್ತು ನಗರಸಭೆಗಳಿಗೆ ಟ್ರೋಫಿ ಯನ್ನು ಜಿಲ್ಲಾಧಿಕಾರಿಯವರು ವಿತರಿಸಲಿರುವರು.
ಎಸ್ಸೆಸ್ಸೆಲ್ಸಿ, ಪ್ಲಸ್ ಟು ತರಗತಿ ಆರಂಭಗೊಂಡಿರುವುದರಿಂದ ಕೋವಿಡ್ ಮಾನದಂಡಗಳನ್ನು ಕಡ್ಡಾಯವಾ ಗಿ ಪಾಲಿಸಬೇಕು. ಎಸ್ಸೆಸ್ಸೆಲ್ಸಿ , ಪ್ಲಸ್ ಟು ತರಗತಿ ಶಿಕ್ಷಕರು ಕೋವಿಡ್ ತಪಾಸಣೆ ನಡೆಸ ಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಜಿಲ್ಲೆಯ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ಒದಗಿಸಬೇಕು. ಇಲ್ಲದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಯವರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಆದೇಶ ನೀಡಿದರು.
ವ್ಯಾಪಾರ ಮಳಿಗೆಗಳಲ್ಲಿ ಮಾಸ್ಕ್, ಗ್ಲೌಸ್ ಬಳಸದೆ , ಹವಾನಿಯಂತ್ರಕ ಬಳಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ಡಿ ಶಿಲ್ಪಾ ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎನ್ . ದೇವಿದಾಸ್ , ಕಂದಾಯಾಧಿಕಾರಿ ವಿ .ಜಿ ಶಂಸುದ್ದೀನ್ , ವಿದ್ಯಾಧಿಕಾರಿ ಎ . ವಿ ರಾಮ ದಾಸ್ ಮೊದಲಾದವರು ಉಪಸ್ಥಿತರಿದ್ದರು.