ಪುತ್ತೂರು: ಮುಖದ ಮೇಲಿನ ಮೊಡವೆ ಹೆಚ್ಚಿದ್ದರಿಂದ ಮನನೊಂದು 9 ತರಗತಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ನೇರೋಳ್ತಡ್ಕದಲ್ಲಿ ನಡೆದಿದೆ.
ನೇರೋಳ್ತಡ್ಕದ ರಾಮ ಎಂಬವರ ಪುತ್ರಿ ದಿವ್ಯಾ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 9ನೇ ತರಗತಿ ಓದುತ್ತಿದ್ದರು. ಶುಕ್ರವಾರ ಶಾಲೆ ಆರಂಭವಾಗಿದ್ದರಿಂದ ಶಾಲೆಗೆ ಹೋಗುವುದಾಗಿ ಹೇಳಿ ಮನೆಯ ಪಕ್ಕದ ಗೇರು ಬೀಜ ಗುಡ್ಡೆಯಲ್ಲಿ ಮರವೊಂದಕ್ಕೆ ಮೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲ ತಿಂಗಳುಗಳಿಂದ ಮೊಡವೆಯ ಕಾರಣದಿಂದಲೇ ಆಕೆ ಮನೆಯಿಂದ ಹೊರ ಹೋಗುತ್ತಿರಲಿಲ್ಲ ಎಂದು ಹೇಳಲಾಗಿದ್ದು ಶಾಲೆ ಶುರುವಾದ ಕಾರಣ, ಮನೆಯಿಂದ ಹೊರ ಹೋಗಲೇಬೇಕಾದ ಪರಿಸ್ಥಿತಿ ಎದುರಾಗಿದೆ ಖಿನ್ನತೆಗೆ ಒಳಗಾದ ದಿವ್ಯ ಇಂತಹ ಕೆಲಸವನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.