ಶಿವಮೊಗ್ಗ: ಶಿವಮೊಗ್ಗದ ಪೆಸಿಟ್ ಕಾಲೇಜು ಆವರಣದಲ್ಲಿ ರಾಜ್ಯ ವಿಶೇಷ ಸಭೆ ನಡೆದಿದ್ದು, ಬಿಎಸ್ ವೈ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಭಾಪತಿ ಡಿ.ಎಸ್.ಶಂಕರ ಮೂರ್ತಿ ಒಂದಿಗೆ ಜಗನ್ನಾಥ್ ರಾವ್ ಜೋಶಿ ಮಹಾದ್ವಾರದಮೂಲಕ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಹಿರಿಯರ ಶ್ರಮದಿಂದ ಬಿಜೆಪಿ ರಾಜ್ತದಲ್ಲಿ ಅಧಿಕಾರಕ್ಕೆ ಬಂದಿದೆ. ಇದು ವಿಶೇಷವಾದ ಕಾರ್ಯಕ್ರಮ, ರಾಜ್ಯವನ್ನ ಮಾದರಿ ರಾಜ್ಯವನ್ಬಾಗಿ ಮಾಡಬೇಕು. ನಿಮ್ಮ ಕನಸನ್ನ ನನಸು ಮಾಡಬೇಕು. ಗ್ರಾಪಂ ಚುನಾವಣೆ ಬಿಜೆಪಿಗೆ ತೃಪ್ತಿ ತಂದಿದೆ. ನಾಳೆ ಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಗೆಲ್ಲಬೇಕಿದೆ. ಎರಡು ವರ್ಷದಲ್ಲಿ ಶ್ರಮಪಟ್ಟು ಮುಂದಿನ ವಿಧಾನ ಸಭೆಯಲ್ಲಿ 150 ಸ್ಥಾನವನ್ನ ಪಡೆದು ಮತ್ತೆ ಅಧಿಕಾರಕ್ಕೆ ತರುವ ಗುರಿ ಹೊಂದೋಣವೆಂದು ಕರೆ ನೀಡಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಖೀನ್ ಕುಮಾರ್ ಕಟೀಲ್, ಹತ್ತಾರು ವಿಷಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಬಿಜೆಪಿಯ ಕನಸಾಗಿತ್ತು. ಅದನ್ನ ಬಿಎಸ್ ವೈ ನೇತೃತ್ವದಲ್ಲಿ ಕಾನೂನು ಜಾರಿಮಾಡಿದೆ. ಕಾರ್ಯರ್ತನಿಗೆ ಗುರು ಮತ್ತು ಕಣ್ಣು ಮುಖ್ಯ. ಹತ್ತಾರು ವರ್ಷಗಳ ಕಾಲ ತಮ್ಮ ಗುರಿ ಸಾಧಿಸಲು ಶ್ರಮಿಸಿದ್ದೇವೆ. ಗುರುಗಳ ಮಾರ್ಗದರ್ಶನದಲ್ಲಿ ಬಿಜೆಪಿ ಸಾಗಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಬಿಎಸ್ ವೈ ನಡೆದಿದ್ದಾರೆ. ಎರಡನೇ ಮುಖ್ಯ ಅಂಶ ಕಣ್ಣು, ಕಾರ್ಯಕರ್ತನಿಗೆ ಗೋಮಾತೆಯೇ ಕಣ್ಣು. ಆಕೆಯನ್ನ ರಕ್ಷಿಸುವುದು ನಮ್ಮ ಧ್ಯೇಯ ಹಾಗಾಗಿ ಗೋ ಹತ್ಯೆ ನಿಷೇಧ ಮಾಡಲಾಗಿದೆ ಎಂದರು.
ಮಹಾದ್ವಾರದ ಬಳಿ ಬಿಜೆಪಿಯ ಮಹಿಳಾ ಕಾರ್ಯಕರ್ತರು ಸಿಎಂಗೆ ಆರತಾಕ್ಷತೆ ಎತ್ತುವ ಮೂಲಕ ಸ್ವಾಗತಿಸಿದರು. ನಂತರ ಪಕ್ಷದ ಧ್ವಜ ಹಾರಿಸಲಾಯಿತು. ಗೋಹತ್ಯೆ ಕಾನೂನು ಜಾರಿಗೆ ತಂದ ಹಿನ್ನಲೆಯಲ್ಲಿ ಗೋಪೂಜೆ ಸಲ್ಲಿಸಿದರು.
ನಂತರ ಜನಸಂಘದ ಕಾಲದಿಂದ ಸಂಘಟನೆಯಲ್ಲಿ ತೊಡಗಿದ ಹಿರಿಯರಿಗೆ ಸಿಎಂ ಅಭಿನಂದಿಸಿದರು. ನಾಲ್ವರಿಗೂ ಸನ್ಮಾನ ಸಲ್ಲಿಸಲಾಯಿತು. ರೈತರಿಂದ ನಾಲ್ವರೂ ಮುಖಂಡರಿಗೆ ಸನ್ಮಾನಿಸಲಾಯಿತು.