News Kannada
Friday, December 09 2022

ಕರ್ನಾಟಕ

ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

Photo Credit :

ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

ಪಿರಿಯಾಪಟ್ಟಣ: ತಾಲೂಕಿನ ಚಿಕ್ಕಕಮರವಳ್ಳಿ ಮತ್ತು ದೊಡ್ಡಕಮರವಳ್ಳಿ ಗ್ರಾಮದ ಮೀಸಲು ಅರಣ್ಯ ಪ್ರದೇಶದ ಜಮೀನು ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಸ್ಥಳೀಯರು ಗಾಬರಿಗೊಂಡು ಅರಣ್ಯ ಇಲಾಖೆಗೆ ವಿಷಯ ತಿಳಿಸಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಆನೆಗಳು ಗ್ರಾಮದತ್ತ ಪ್ರವೇಶಿಸುತ್ತಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ ತಕ್ಷಣ ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಕೊಡಗು ಜಿಲ್ಲೆ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸಹಾಯದಿಂದ ಕಾಡಾನೆಗಳನ್ನು ಮತ್ತೆ ಮರಳಿ ಕಾಡಿಗಟ್ಟಿದ್ದಾರೆ, ಈ ವೇಳೆ ಮಾತನಾಡಿದ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಕೊಡಗು ಜಿಲ್ಲೆಯ ಸೀಗೇಹೊಸೂರು ಗ್ರಾಮದಿಂದ ಕಾವೇರಿ ನದಿಯ ಮಾರ್ಗವಾಗಿ ಆನೆಗಳು ಬಂದಿವೆ. ಕೊಡಗು ಜಿಲ್ಲೆ ಅರಣ್ಯ ಇಲಾಖೆ ಸಿಬ್ಬಂದಿ, ಬೆಟ್ಟದಪುರ ಪೊಲೀಸ್ ಸಿಬ್ಬಂದಿ, ಕೊಪ್ಪ ಮತ್ತು ಬೆಟ್ಟದಪುರ ಅರಣ್ಯ ಉಪವಲಯದ ಸಿಬ್ಬಂದಿ ಕೋವಿಯಲ್ಲಿ ಸಿಡಿಮದ್ದು ಸಿಡಿಸುವುದರ ಮೂಲಕ ಕಾಡಿಗೆ ಆನೆಗಳನ್ನು ಕಣಿವೆ ಕ್ವಾಟ್ರಸ್ ಮಾರ್ಗವಾಗಿ ಓಡಿಸಲಾಯಿತು ಎಂದರು.

ಕಾರ್ಯಾಚರಣೆಯಲ್ಲಿ ಕೊಡಗು ಅರಣ್ಯಾಧಿಕಾರಿ ಭರತ್, ಉಪವಲಯ ಅರಣ್ಯಾಧಿಕಾರಿಗಳಾದ ಸತೀಶ್, ಮಧುಸೂದನ್, ಮಹೇಶ್, ಬೆಟ್ಟದಪುರ ಪ್ರಬೆಷನರಿ ಪಿಎಸ್‌ಐ ಜೀತೇಂದ್ರಕುಮಾರ್, ಎಸ್‌ಐ ಮಹೇಶ್ ಕುಮಾರ್, ಅರಣ್ಯ ರಕ್ಷಕರಾದ ಪೆಮ್ಮಯ್ಯ, ವರುಣ್, ಲೋಕೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

See also  ವೈದ್ಯರ ಮುಷ್ಕರ: ಚಿಕ್ಕೋಡಿಯಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು