ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲಿನ ಹಲ್ಲೆಯಲ್ಲಿ ಭಾಗಿಯಾಗಿದ್ದ ಮುಸ್ಲೀಂ ಗೂಂಡಾಗಳನ್ನ ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನ ಬಂಧಸುವಲ್ಲಿ ಇಲಾಖೆ ಹೆಚ್ಚಿನ ಆಸಕ್ತಿ ತೋರಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಧರಣಿ ಕುಳಿತಿದ್ದರು.
ನಾಗೇಶ್ ಮೇಲಿನ ಹಲ್ಲೆ ನಂತರದ ಪರಿಸ್ಥಿತಿಯಲ್ಲಿ ನಡೆದ ಗಲಭೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನ ಬಂಧಿಸಲಾಗಿದೆ. ಆದರೆ ನಾಗೇಶ್ ಮೇಲಿನ ಹಲ್ಲೆ ನಡೆದು ಇಂದಿಗೆ 1 ತಿಂಗಳು 4 ದಿನ ಕಳೆದಿದ್ದರೂ ಇದುವರೆಗೂ ಮುಸ್ಲೀಂ ಗೂಂಡಾಗಳನ್ನ ಬಂಧಿಸಲಾಗಿಲ್ಲ. ಈ ಉದ್ದೇಶವಾದರೂ ಏನಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಬಂಧಿಸುವುದರಲ್ಲಿ ನಮ್ಮ ಆಕ್ಷೇಪಣೆ ಇಲ್ಲ. ಆದರೆ ನಾಗೇಶ್ ನ ಮೇಲೆ ಹಲ್ಲೆ ಮಾಡಿದವರನ್ನ ಯಾಕೆ ಬಂಧಿಸಿಲ್ಲ ಎಂಬುದು ಹಿಂದೂ ಸಂಘಟನೆಯ ಆಗ್ರಹವಾಗಿದೆ.
ನಾಗೇಶ್ ಮೇಲಿನ ಹಲ್ಲೆಯ ನಂತರ ನಡೆದ ಗಲಭೆಯಲ್ಲಿ ಮೂರು ಎಫ್ ಐಆರ್ ಆಗಿದ್ದು ಆ ಸಂಬಂಧ ನಿನ್ನೆ 10 ಜನರನ್ನ ಬಂಧಿಸಲಾಗಿತ್ತು. ಆದರೆ ಇದರಲ್ಲಿ ಮದುವೆ ಮನೆಗೆ ಹೋದವರ ಮೇಲೂ ಎಫ್ಐಆರ್ ಆಗಿದ್ದು ಅವರನ್ನೂ ಬಂಧಿಸಲಾಗಿದೆ ಎಂದು ಹಿಂದೂ ಸಂಘಟನೆ ಆರೋಪಿಸಿದೆ.
ಪ್ರತಿಭಟನೆಯಲ್ಲಿ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಸದಸ್ಯ ವಿಶ್ವಾಸ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ರಾಜಾರಾಮ್ ಭಟ್ ಮೊದಲಾದ ಹಿಂದೂ ಸಂಘಟನೆ ಸದಸ್ಯರು ಭಾಗವಹಿಸಿದ್ದರು.