ಶಿವಮೊಗ್ಗ: ದೊಡ್ಡಪೇಟೆ ಠಾಣೆಯಲ್ಲಿ ಬಂಧನಕ್ಕೊಳಗಾದ ಮುಸ್ಲೀಂ ಹುಡುಗರ ಕುಟುಂಬದವರು ಪೊಲೀಸ್ ಠಾಣೆಯ ಮುಂದೆ ಹಿಂದೂ ಸಂಘಟನೆಯ ಮುಖಂಡ ಧೀನ್ ದಯಾಳನ್ನ ಬಂಧಿಸವಂತೆ ಒತ್ತಾಯಿಸಿ ಹಾಗೂ ಅಮಾಯಕ ಮುಸ್ಲಿಂ ಯುವಕರನ್ನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಲಾಯಿತು. ಕಳೆದ ತಿಂಗಳು ಅಹಿತಕರ ಘಟನೆಯಿಂದ ಜರ್ಜರಿತವಾಗಿದ್ದ ಶಿವಮೊಗ್ಗ ನಗರ ಬಂಧನದ ವಿಚಾರದಲ್ಲಿ ಮತ್ತೆ ಪ್ರತಿಭಟನೆ ಮರುಪ್ರತಿಭಟನೆಗಳು ಆರಂಭಿಸಿವೆ.
ಬಿಜೆಪಿ ಕಾರ್ಯಕರ್ತ ನಾಗೇಶ್ ಗೌಡ ಮೇಲಿನ ಹಲ್ಲೆ ತದನಂತದರ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಸೆಕ್ಷನ್ 144 ಹಾಗೂ ಕರ್ಫ್ಯೂ ಹೇರಲಾಗಿತ್ತು. ಈ ಸೆಕ್ಷನ್ ಗೆ ಜನ ಮಾತ್ರ ಹೈರಾಣಾಗಿದ್ದರು. ಈಗ ದೊಡ್ಡಪೇಟೆ ಮತ್ತು ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣಗಳು ನಡೆದಿದ್ದು, ಸುಮಾರು ಎರಡೂ ಠಾಣೆಯಲ್ಲಿ ಸುಮಾರು 30 ಜನರನ್ನ ಬಂಧಿಸಲಾಗಿದೆ ಎನ್ನಲಾಗಿದ್ದು. ಆದರೆ ಬಂಧನದ ವಿಚಾರದಲ್ಲಿ ಎರಡೂ ಸಂಘಟನೆಗಳು ಪೊಲೀಸ್ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಅಮಾಯಕರನ್ನ ಬಂಧಿಸಲಾಗಿದೆ ಎಂಬುದು ಎರಡೂ ಸಂಘಟನೆಗಳ ಕೂಗಾಗಿದೆ.
ನಾಗೇಶ್ ಮೇಲಿನ ಹಲ್ಲೆಯ ನಂತರ ಹಿಂದೂ ಸಂಘಟನೆಯ ಮುಖಂಡ ಧೀನ್ ದಯಾಳು ಗಲಭೆ ಸಂದರ್ಭದಲ್ಲಿ ಹಾಜರಿದ್ದು ಆತನನ್ನ ಬಂಧಿಸಬೇಕು ಹಾಗೂ ಅಮಾಯಕ ಯುವಕರನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು. ಏನು ದೂರು ನೀಡುತ್ತೀರೋ ಕೊಡಿ, ಇದನ್ನ ಹಿರಿಯ ಪೊಲೀಸರ ಗಮನಕ್ಕೆ ತರಲಾಗುವುದು. ಅವರ ನಿರ್ದೇಶನದಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಳ್ಳಲಾಗುವುದು ಎಂದು ದೊಡ್ಡಪೇಟೆ ಪೊಲೀಸರು ಭರವಸೆ ನೀಡಿದರು.
ಠಾಣೆಯ ಒಳಭಾಗದಲ್ಲಿ ಸಬ್ ಇನ್ ಸ್ಪೆಕ್ಟರ್ ಕೊಠಡಿಯಲ್ಲಿ ಮುಸ್ಲೀಂ ಮುಖಂಡ ಪರ್ವೇಜ್ ನೇತೃತ್ವದಲ್ಲಿ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ಹಾಗೂ ಸಿಪಿಐ ವಸಂತ್ ಕುಮಾರ್ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಟಿಪ್ಪು ಸಹರಾ ಸಮಿತಿ, ಧೀನ್ ದಯಾಳು ವಿರುದ್ಧ ದೂರಿನ ಅರ್ಜಿ ಸಲ್ಲಿಸಲಾಯಿತು. ಪೊಲೀಸ್ ಇಲಾಖೆ ಮಧ್ಯಾರಾತ್ರಿಯ ವೇಳೆ ಅಮಾಯಕರನ್ನ ಬಂಧಿಸಲಾಗಿದೆ. ಮನೆಯ ಹೆಣ್ಣುಮಕ್ಕಳ ಮೇಲೆ ಅವ್ಯಚ್ಯಶಬ್ದಗಳಿಂದ ಬೈಯಲಾಗಿದೆ. ಈ ರೀತಿಯ ದೌರ್ಜನ್ಯ ಸಹಿಸಲಾಗದು. ಜೊತೆಗೆ ಧೀನ್ ದಯಾಳನ್ನ ಬಂಧಿಸಬೇಕು. ಹೆಣ್ಣುಮಕ್ಕಳನ್ನ ಬಂಧಿಸಬಾರದು. ಇದು ಮುಂದು ವರೆದರೆ ಸಹಿಸಲಾಗದು. ಮುಸ್ಲಿಂ ಸಂಘಟನೆ ಸುಮ್ಮನೆ ಕೂರುವುದಿಲ್ಲವೆಂದು ಹೇಳಿದರು.
ದೂರಿನ ಅರ್ಜಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಹೆಣ್ಣು ಮಕ್ಕಳನ್ನ ಬಂಧಿಸಿದರೆ ಅದು ತಪ್ಪು. ಇದು ಗಮನಕ್ಕೆ ಬಂದಿರಲಿಲ್ಲ. ಅಮಾಯಕರನ್ನ ಬಂಧಿಸುವುದಿಲ್ಲ ಎಂದು ಭರವಸೆ ನೀಡಿದರು.