ಭದ್ರಾವತಿ: ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ನೀಡಿರುವ 33 ಸಾವಿರ ಹೆಕ್ಟೇರು ಅರಣ್ಯ ಭೂಮಿಯ ಲೀಸ್ ನ್ನು ಮತ್ತೆ 40 ವರ್ಷ ಅವಧಿಗೆ ಸರ್ಕಾರ ವಿಸ್ತರಣೆ ಖಂಡಿಸಿ ನಡೆಯುತ್ತಿರುವ ನಮ್ಮೂರಿಗೆ ಅಕೇಷಿಯಾಬೇಡ ಹೋರಾಟದ ಪ್ರತಿಭಟನೆಯನ್ನು, ಪೊಲೀಸರು ಹೊಳೆಹೊನ್ನೂರ ರಸ್ತೆಯಲ್ಲಿರುವ ಶ್ರೀಗಂಧ ಕೋಠಿಯ ಗೇಟ್ ಬಳಿ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಗಿದೆ.
ಇಂದು ಬೆಳಿಗ್ಗೆ 10:30 ಕ್ಕೆ ನಗರದ ಬೆಕ್ಕಿನ ಕಲ್ಮಠದಿಂದ ಸಿಸಿಎಫ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹೊರಟಿತು. ಪ್ರತಿಭಟನಾಕಾರರನ್ನು ಕಚೇರಿ ಪ್ರವೇಶಿಸದಂತೆ ಶ್ರೀಗಂಧ ಕೋಠಿಯ ಗೇಟ್ ಬಳಿ ಪೊಲೀಸರು ಪ್ರತಿಭಟನಾಕಾರರನ್ನ ತಡೆದಿದ್ದಾರೆ
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಗಿದೆ. ಪ್ರತಿಭಟನೆ ನಡೆಸಲು ಒಳಗಡೆ ಬಿಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಆದರೆ ಪೊಲೀಸರು ಶ್ರೀಗಂಧ ಕೋಠಿಯಾಗಿರುವುದರಿಂದ ಒಳಗೆ ಬಿಡುವುದಿಲ್ಲವೆಂದು ಹೇಳಿದ್ದಾರೆ.
ರೈತ ಮುಖಂಡ ಕೆ.ಟಿ.ಗಂಗಾಧರ್, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚನ್ನಿ, ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಬಿ.ಎ.ರಮೇಶ್ ಹೆಗ್ಡೆ, ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಶೋಕ್ ಯಾದವ್, ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ, ವಕೀಲ ಕೆ.ಪಿ.ಶ್ರೀಪಾಲ್, ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರ ಸ್ವಾಮಿ ಮತ್ತಿತರರು
ಕಚೇರಿ ಪ್ರವೇಶ ದ್ವಾರದಲ್ಲೆ ಪ್ರತಿಭಟನೆಯನ್ನ ಹೋರಾಟ ಸಮಿತಿ ಮುಂದುವರಿಸಿದೆ.