ಚಿಕ್ಕಬಳ್ಳಾಪುರ : ಅಕ್ಕನ ಸಂಸಾರ ಸರಿಪಡಿಸಲು ಹೋದ ತಮ್ಮ. ಭಾವನ ಅನೈತಿಕ ಸಂಬಂಧವನ್ನು ಬಯಲುಮಾಡಲು ಮುಂದಾದ ಹಿನ್ನೆಲೆಯಲ್ಲಿ ಮೈದುನನನ್ನೇ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಕೊಲೆಯಾಗಿರುವ ಯುವಕ 25 ವರ್ಷದ ಇಮ್ರಾನ್ ಖಾನ್ ಎಂದು ಗುರುತಿಸಲಾಗಿದ್ದು, ಆರೋಪಿ ಸಾಧಿಕ್ ಪಾಷಾ ಚಾಂದ್, ಟಿಪ್ಪು, ಸಮಿವುಲ್ಲಾ, ಸಯ್ಯದ್ ಕೊಲೆ ಮಾಡಿರುವ ಆರೋಪಿಗಳು ಎಂದು ಹೇಳಲಾಗಿದೆ.
ಕಳೆದ 5 ವರ್ಷಗಳ ಹಿಂದೆ ರುಕ್ಸಾನಾ ಎಂಬಾಕೆಯನ್ನು ಚಾಂದ್ ಪಾಷಾ ಮದವೆಯಾಗಿದ್ದ ನಂತರ ಮುಮ್ತಾಜ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಇಮ್ರನ್ ಖಾನ್ ಸಾಕಷ್ಟು ಬಾರಿ ಚಾಂದ್ ಪಾಷಾ ಜೊತೆಗೆ ಜಗಳ ಮಾಡಿದ್ದ. ಇತ್ತೀಚೆಗೆ ಇದೇ ವಿಚಾರವಾಗಿ ಬಾವನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದ. ಇದರಿಂದಾಗಿ ಕುಪಿತಗೊಂಡ ಚಾಂದ್ ಪಾಷಾ ಸ್ನೇಹಿತರೊಂದಿಗೆ ಕೊಡಿ ಮೈದುನನನ್ನು ಸಾಯಿಸುವ ಪ್ಲಾನ್ ರೂಪಿಸಿದ್ದು, ಅದರಂತೆ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೌರಿಬಿದನೂರು ಪೊಲೀಸರು, ನಾಲ್ಕೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.