ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಚೂರಿಕಟ್ಟೆ ನಿವಾಸಿ ಫರೀದ್ ಸಾಬ್ ರವರ ಪುತ್ರ ಹಸಮ್ ಫರೀದ್ ಸಾಬ್ (28) ಡಿಸೆಂಬರ್ 27ಕ್ಕೆ ಕುವೈತ್ ದೇಶದ ಸೀಟಿ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಕುರಿತು ಫರೀದ್ ಸಾಬ್ ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಹಸಮ್ ಫರೀದ್ ಸಾಬ್ ರವರ ಕುಟುಂಬ ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 29 2020 ರಂದು ಹಸಮ್ ಫರೀದ್ ಚಿಕ್ಕಮ್ಮನ ಮಗ ಶಫಿವುಲ್ಲಾ ಸಾಗರ ಉಪವಿಭಾಗ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ತನ್ನ ತಮ್ಮನ ಸಾವಿನ ತನಿಖೆ ಆಗಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿರುವುದರು. ಮನವಿ ಪಡೆದುಕೊಂಡ ಅಧಿಕಾರಿಗಳು ತಕ್ಷಣ ಈ ಮನವಿಯನ್ನು ಜಿಲ್ಲಾ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದು ಈ ಕುರಿತು ಜಿಲ್ಲಾಧಿಕಾರಿಕಚೇರಿಗೆ ತಲುಪಿಲ್ಲದಿರುವುದು ತಿಳಿದುಬಂದಿದೆ.
ನಂತರ ಮಾರನೇ ದಿನ ಎಸಿ ಕಚೇರಿಗೆ ನೀಡಲಾದ ಮನವಿಯ ಬಗ್ಗೆ ಮಾಹಿತಿ ಪಡೆದ ಚಿಕ್ಕಮ್ಮನ ಮಗ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಹೋಗಿರುವುದಿಲ್ಲ ಎಂದು ಗೊತ್ತಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಶಫಿವುಲ್ಲಾ ತಾನೇ ಖುದ್ದಾಗಿ ಏಸಿ ಕಚೇರಿಯಿಂದ ಮನವಿಯನ್ನು ಪಡೆದುಕೊಂಡು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಿದ್ದಾನೆ ಎಂದರು.
ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಮನವಿ ಪಡೆದುಕೊಂಡ ಅಧಿಕಾರಿಗಳು ನಿಮ್ಮ ಮನವಿಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆ(ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ವಿಧಾನ ಸೌಧ ಬೆಂಗಳೂರು ಗೆ ಕಳುಹಿಸಿಕೊಡಲಾಗುವುದು ಎಂದು ದಿನಾಂಕ 01-01-2021 ರಂದು ಹಸಮ್ ಸಹೋದರನಿಗೆ ಹೇಳಿರುತ್ತಾರೆ. ಆದರೆ ನಾಲ್ಕು ದಿನಗಳ ಆದರೂ ಕುವ್ಯತ್ ದೇಶದ ಭಾರತೀಯ ರಾಯಭಾರಿ ಕಚೇರಿಗೆ ಅರ್ಜಿ ಹೋಗಿರುವುದಿಲ್ಲ ಎಂದು ಮಾಹಿತಿ ಬಂದ ತಕ್ಷಣ ಹಸಮ್ ಫರೀದ್ ರವರ ಬಾವ ಶಕೀಲ್ ಅಹ್ಮದ್ ಖುದ್ದಾಗಿ ಬೆಂಗಳೂರಿನ ವಿಧಾನಸೌಧದಲ್ಲಿರುವ ಒಳಾಡಳಿತ ಇಲಾಖೆ(ಕಾನೂನು ಮತ್ತು ಸುವ್ಯವಸ್ಥೆ ವಿಭಾಗ)ಕ್ಕೆ ಭೇಟಿ ನೀಡಿದ್ದರು.
ಅಧಿಕಾರಿಗಳು ಪರಿಶೀಲಿಸಿದ ನಂತರ ಅಧಿಕಾರಿಗಳ ಉತ್ತರ ಹೀಗಿದೆ ನಮಗೆ ಜಿಲ್ಲಾ ಅಧಿಕಾರಿಗಳಿಂದ ನಿಮ್ಮ ಅರ್ಜಿಯ ಹಾರ್ಡ್ ಕಾಪಿ ಇನ್ನೂ ಬಂದಿಲ್ಲ ನಮಗೆ ಬಂದ ತಕ್ಷಣ ನಾವು ನಿಮ್ಮ ಅರ್ಜಿಯನ್ನು ಕುವ್ವತ್ ದೇಶದ ಭಾರತೀಯ ರಾಯಭಾರಿ ಕಚೇರಿಗೆ ಕಳುಹಿಸಬಹುದು ಅಲ್ಲಿ ತನಕ ನಮಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಉತ್ತರ ನೀಡುತ್ತಾರೆ. ಶಿವಮೊಗ್ಗ ಜಿಲ್ಲಾ ಸಂಸದರು ಬಿವೈ ರಾಘವೇಂದ್ರ ಹಾಗೂ ಸಾಗರ ಕ್ಷೇತ್ರದ ಹಾಲಿ ಶಾಸಕರು ಹೆಚ್ ಹಾಲಪ್ಪ ಹರತಾಳುನವರು ಹಸಮ್ ಫರೀದ್ ಸಾಬ್ ರವರ ಸಾವಿನ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕುಟುಂಬಸ್ಥರು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನವರಿಗೆ ಭೇಟಿ ನೀಡಿ ಮಾಹಿತಿ ನೀಡಿದ ನಂತರ ಸಚಿ ಮಾಜಿ ಸಚಿವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ ವಿಭಾ ವಿಧಾನಸೌಧ ಬೆಂಗಳೂರು ರವರಿಗೆ ತಮ್ಮ ಪತ್ರವನ್ನು ನೀಡಿರುತ್ತಾರೆ ಎಂದು ತಿಳಿಸಿದರು. ಹಸಮ್ ಫರೀದ್ ಸಾಬ್ ಸಮುದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಮಗೆ ಬಂದ ಮಾಹಿತಿ ಆಗಿದೆ. ಆದರೆ ಬಂದ ತಕ್ಷಣ ನಾವು ಕುವೈತಿನ ನಮ್ಮ ಸ್ನೇಹಿತರಿಗೆ ಸಂಪರ್ಕಿಸಿ ಅವನು ತಂಗಿದ ರೂಂ ಬಳಿ ಹೋಗಲು ತಿಳಿಸಿದ್ದೇವೆ ರೂಂ ಬಳಿ ಹೋಗಿದ್ದ ಸ್ನೇಹಿತರು ನಮ್ಮ ಕುಟುಂಬಕ್ಕೆ ಆಘಾತಕರ ಸುದ್ದಿ ಒಂದು ನೀಡಿದರು.
ಫರೀದ್ ಸಾಬ್ ಅವರ ಬೆಡ್ಡಿನ ಮೇಲೆ ರಕ್ತದ ಕಲೆ ಇದೆ ಎಂದು ತಿಳಿಸಿದರು ನಮಗೆ ಅನುಮಾನ ವ್ಯಕ್ತವಾಗಿತ್ತು ನಾವು ತನಿಖೆಗಾಗಿ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಮೊರೆ ಹೋಗಿದ್ದೇವೆ ಆದರೆ ಮೊನ್ನೆ ದಿನ ನಮಗೆ ವಾಟ್ಸಪ್ ನಲ್ಲಿ ಬಂದ ಹಸಮ್ ಫರೀದ್ ಸಾಬ್ ಹೃದಯ ಅಪಘಾತ ದಿಂದ ಸಾವನ್ನಪ್ಪಿದ್ದಾನೆ ಎಂದು ಮರಣ ಪತ್ರ ನೀಡಿದ್ದಾರೆ. ನಾವು ಬಡಪಾಯಿಗಳು ನಮಗೆ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಸ್ಥಳೀಯ ಸಂಸದರು ನಮಗೆ ಸಹಕರಿಸಬೇಕು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ತೋಡಿಕೊಂಡರು.