News Kannada
Friday, February 03 2023

ಕರ್ನಾಟಕ

ನಮ್ಮ ತಲೆ ಮೇಲೆ ಸಿದ್ದರಾಮಯ್ಯ ಮಾಡಿಟ್ಟ ಸಾಲ!

Photo Credit :

ನಮ್ಮ ತಲೆ ಮೇಲೆ ಸಿದ್ದರಾಮಯ್ಯ ಮಾಡಿಟ್ಟ ಸಾಲ!

ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ರಾಜ್ಯದಲ್ಲೇ ಅತಿ ಹೆಚ್ಚಿನ ಸಾಲ ಮಾಡಿ ಬಿಟ್ಟು ಹೋಗಿದ್ದಾರೆ. ಆ ಹೊರೆ ನಮ್ಮೆಲ್ಲರ ತಲೆಯ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಟೀಕಿಸಿದರು.

ಸ್ವಾಮಿ ವಿವೇಕಾನಂದರ 158ನೇ ಜಯಂತಿ ಅಂಗವಾಗಿ ಮಂಡ್ಯದ ನಗರಸಭೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಆವರಣದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಪುಷ್ಪಾರ್ಚನೆ ಮಾಡಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಮಹಾಮಾರಿಯಿಂದಾಗಿ ಸರ್ಕಾರದ ಎಲ್ಲ ಯೋಜನೆಗಳೂ ನಿಂತುಹೋಗಿವೆ. ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೆ ತಿಳಿಯುತ್ತಿತ್ತು. ಅದರ ಸಾಧಕ ಬಾಧಕಗಳೇನು ಎಂದು ಟಾಂಗ್ ನೀಡಿದರು.

ಸಿದ್ದರಾಮಯ್ಯ ಅವರು ಮಾಡಿರುವ ಸಾಲ ಮತ್ತು ಬಡ್ಡಿಯ ಹೊರೆಯೂ ನಮ್ಮ ಸರ್ಕಾರದ ಮೇಲಿದೆ. ಇದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ಸರ್ಕಾರನ್ನು ಯಾವ ರೀತಿ ನಡೆಸಬೇಕು ಎಂಬುದು ನಮಗೂ ಗೊತ್ತಿದೆ, ಅವರಿಂದ ಕಲಿಯಬೇಕಿಲ್ಲ ಎಂದು ಸವಾಲು ಹಾಕಿದರು.

ನಮ್ಮ ಜೊತೆ ಬಂದವರು ಸರ್ಕಾರಕ್ಕೆ ಶಕ್ತಿ ತುಂಬಿದ್ದಾರೆ. ಅವರಿಗೂ ಸ್ಥಾನಮಾನ ದೊರೆಯಬೇಕು. ಅದು ನಮ್ಮ ಇಚ್ಚೆಯೂ ಆಗಿದೆ. ಮುಖ್ಯಮಂತ್ರಿಗಳ ಮನದ ಬಯಕೆಯೂ ಆಗಿದೆ. ಶೀಘ್ರದಲ್ಲೇ ಮೈಷುಗರ್ ಪ್ರಾರಂಭಿಸಲಾಗುವುದು. ಕಬ್ಬು ಅರೆಯುವ ಕಾರ್ಯವನ್ನು ಆರಂಭಿಸಿ ರೈತರಿಗೆ ನೆಮ್ಮದಿಯ ಬದುಕು ನೀಡಲು ನಮ್ಮ ಸರ್ಕಾರ ಸದಾ ಸಿದ್ದವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟೀಕೆ ಮಾಡೊರೆಲ್ಲರೂ ಮುಖ್ಯಮಂತ್ರಿಗಳು, ಮಂತ್ರಿಗಳೂ ಆಗಿದ್ದರು. ಆದರೆ ಅವರೇ ಮೈಷುಗರ್ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಏಕೆ ಮಾಡಲಿಲ್ಲ. ರೈತರ ಪರ ಏಕೆ ಯೋಚನೆ ಮಾಡಲಿಲ್ಲ ಎಂದು ಪ್ರಶ್ನಿಸಿದಲ್ಲದೆ, ಈಗಾಗಲೇ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಲಾಗಿದೆ. ಶೀಘ್ರ ಮೈಷುಗರನ್ನೂ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು.

ಟೀಕೆ ಟಿಪ್ಪಣಿ ಬೇಡ, ದೊಡ್ಡವರು ಅವರು, ದೊಡ್ಡವರ ಮಟ್ಟದಲ್ಲಿ ಮಾತನಾಡಿರುವವರು, ನಾವು ಸರ್ಕಾರವನ್ನು ಯಾವ ಮಟ್ಟಕ್ಕೆ ನಮ್ಮ ಮುಖ್ಯಮಂತ್ರಿಗಳು ತೆಗೆದುಕೊಂದು ಹೋಗುತ್ತೇವೆ ಎಂಬುದನ್ನು ಸಿದ್ದರಾಮಯ್ಯ ನೋಡಲಿ ಎಂದು ಹೇಳಿದರು.

ಸಚಿವ ಸಂಪುಟ ವಿಚಾರ ದೊಡ್ಡವರಿಗೆ ಬಿಟ್ಟಿದ್ದು. ನನಗೆ ಯಾವುದೇ ಬೇಸರವಿಲ್ಲ. ನನ್ನ ಜೊತೆ ಬಂದವರಿಗೂ ಅವಕಾಶ ಸಿಗಲಿ ಎಂಬುದು ನಮ್ಮ ಆಸೆ ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಚುಟುಕಾಗಿ ಉತ್ತರಿಸಿದರು.

See also  ಮರದ ರೆಂಬೆ ಮುರಿದು ಬಾವಿಗೆ ಬಿದ್ದು ಬಾಲಕ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು