ಸೋಮವಾರಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ವಲಯದ ಶೃದ್ದಾಕೇಂದ್ರಗಳ ಸ್ವಚ್ಚತೆ ಕಾರ್ಯಕ್ರಮವನ್ನು ವಲಯದ ದೊಡ್ಡಮಾಳ್ತೆˌ ಗೌಡಳ್ಳಿˌ ಅಬ್ಬೂರುಕಟ್ಟೆˌನಂದಿಗುಂದˌ ಸೋಮವಾರಪೇಟೆ ಪಟ್ಟಣ ಪಂಚಾಯತ್ ವ್ಶಾಪ್ತಿಯ ಕಾರ್ಯಕ್ಷೇತ್ರಗಳಲ್ಲಿ ದೇವಸ್ಥಾನಗಳ ಸ್ವಚ್ಚತೆˌ ಸಾರ್ವಜನಿಕ ಸಮುದಾಯ ಭವನˌ ಅಂಗನವಾಡಿ ಕೇಂದ್ರಗಳ ವಠಾರ ಸ್ವಚ್ಚತೆಯನ್ನು ಮಾಡುವ ಮೂಲಕ ನಡೆಸಲಾಯಿತು.
ಪೂಜ್ಶ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮಕರ ಸಂಕ್ರಾಂತಿಯ ಮುಂಚಿತವಾಗಿ ಶೃದ್ಧಾಕೇಂದ್ರಗಳ ಸ್ವಚ್ಚತೆಯನ್ನು ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ.
ಈ ಕಾರ್ಯಕ್ರಮಗಳನ್ನು ರಾಜ್ಶಾದ್ಶಂತ ಜನವರಿ 07ರಿಂದ 14 ರೊಳಗೆ ಅನುಷ್ಟಾನ ಮಾಡಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮಪಂಚಾಯತ್ ಸಂಘಸಂಸ್ಥೆಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಭಾಗದ ಸ್ವಯಂ ಸೇವಕರು ಒಕ್ಕೂಟದ ಸದಸ್ಶರ ಸಹಕಾರದೊಂದಿಗೆ ನಡೆಸಲಾಯಿತು. ಶೃದ್ಧಾಕೇಂದ್ರಗಳ ಸ್ವಚ್ಚತೆಯಿಂದ ದೇವಸ್ಥಾನದ ಆಡಳಿತ ಮಂಡಳಿಯವರು ಯೋಜನೆ ಕಾರ್ಯಕ್ರಮಗಳ ಬಗ್ಗೆ ಪ್ರಸಂಶನೆಯನ್ನು ವ್ಶಕ್ತಪಡಿಸಿದರು.